ಸಾವಿತ್ರಿಬಾಯಿ ಪುಲೆ ಸಾಧಕಿಯರಿಗೆ ಪ್ರೇರಣೆ

Savitribai Pule is an inspiration to the achievers
Published on

ವಿಜಯಪುರ: ಶಿಕ್ಷಣದ ಜತೆಗೆ ಸಾಮಾಜಿಕ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ಸಾವಿತ್ರಿಬಾಯಿ ಪುಲೆ ಎಂದು ಬಂಜಾರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾಯೆರ್ ಡಾ. ಜಯಶ್ರೀ ಪಾಟೀಲ ಹೇಳಿದರು.

ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು ಮತ್ತು ಕಸಾಪ ನಗರ ಟಕಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ುಲೆ ಕುರಿತು ಹಮ್ಮಿಕೊಂಡಿದ್ದ ಚಿಂತನ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಸದ್ಯದ ಮಹಿಳಾ ಸಮಾಜ ಸುಧಾರಕರಿಗೆ ಸಾವಿತ್ರಿಬಾಯಿ ಪುಲೆ ಅವರು ಪ್ರೇರಣೆಯಾಗಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂದ ಅಧ್ಯಕ್ಷೆ ಅಕ್ಕಮ್ಮ ನಾಯಕ ಮಾತನಾಡಿ, ಸಾವಿತ್ರಿಬಾಯಿ ುಲೆ ವಸತಿ ಶಾಲೆ ಸ್ಥಾಪಿಸುವ ಮೂಲಕ ಹಲವು ಅಸಹಾಯಕ, ದುರ್ಬಲ ಜನರಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದರು ಎಂದರು.

ಮಡಿಕೇಶ್ವರದ ಸಾಹಿತಿ ಅಂಬಿಕಾ ಕರಕಪ್ಪಗೋಳ ಉಪನ್ಯಾಸ ನೀಡಿ, 18ನೇ ಶತಮಾನ ಮೌಢ್ಯತೆಯಿಂದ ತುಂಬಿತ್ತು. ಅಂತಹ ಸಂದರ್ಭದಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸಾವಿತ್ರಿಬಾಯಿ ಪುಲೆ ನಿರ್ವಹಿಸಿದರು ಎಂದು ತಿಳಿಸಿದರು.

ಮುಖ್ಯ ಅತಿಥಿ ಸುಮಂಗಲಾ ಕೋಟಿ ಮಾತನಾಡಿದರು. ಶಾಂತಾ ಬಿರಾದಾರ, ಶೋಭಾ ಹರಿಜನ, ರೂಪಾ ರಜಪೂತ ಹಾಗೂ ಜ್ಯೋತಿ ಹೀರೆಮಠ ಸಾವಿತ್ರಿಬಾಯಿ ುಲೆ ಕುರಿತು ಕವನ ವಾಚಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಸಿದ್ರಾಮಯ್ಯ ಲಕ್ಕುಂಡಿಮಠ, ಡಾ. ಆನಂದ ಕುಲಕರ್ಣಿ, ಎಸ್​.ಎಲ್​. ಇಂಗಳೇಶ್ವರ, ಜಯಶ್ರೀ ಹಿರೇಮಠ, ಸುಖದೇವಿ ಅಲಬಾಳಮಠ, ರಾಜೇಸಾಬ ಶಿವನಗುತ್ತಿ, ದೇವಣ್ಣ ಹಾವಗೊಂಡ, ಅಮಸಿದ್ದ ಪೂಜಾರಿ, ಬಸವರಾಜ ಜಂಗಮಶೆಟ್ಟಿ, ಅರವಿಂದ ಇನಾಮದಾರ, ಟಿ.ಆರ್​. ಹಾವಿನಾಳ, ಪ್ರದಿಪ ನಾಯ್ಕೋಡಿ, ವೈ.ಎಚ್​ ಲಂಬು, ಅರ್ಜುನ ಶಿರೂರ, ಮಹಿಬೂಬ ಜಿದ್ದಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net