ಮಹಿಳೆಯರಿಗೆ ಪ್ರೇರಣೆಯಾದ ಧೀಮಂತ ಮಹಿಳೆ ಸಾವಿತ್ರಿಬಾಯಿ ಪುಲೆ

5 BIRUR 01
Published on

ಬೀರೂರು: ಶತಮಾನಗಳಿಂದ ಅವಕಾಶ ವಂಚಿತರಾಗಿದ್ದ ಮಹಿಳೆಯರ ಸಬಲೀಕರಣಕ್ಕಾಗಿ ಶಿಕ್ಷಣದ ಹಾದಿಯನ್ನು ಆಯ್ದುಕೊಂಡು ತಾವೇ ಶಿಕ್ಷಕಿಯಾಗಿ ಇತರೆ ಮಹಿಳೆಯರಿಗೆ ಪ್ರೇರಣೆಯಾದ ಧೀಮಂತ ಮಹಿಳೆ ಸಾವಿತ್ರಿಬಾಯಿ ಪುಲೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ ಹೇಳಿದರು.

ಬಳ್ಳಾರಿ ಕ್ಯಾಂಪ್‌ನ ರೈಲ್ವೆ ಕಾಲನಿ ಸರ್ಕಾರಿ ಶಾಲೆಯಲ್ಲಿ ಮಾತೆ ಸಾವಿತ್ರಿಬಾಯಿ ಪುಲೆ ಅವರ ಜನ್ಮ ದಿನದ ಕಾರ್ಯಕ್ರಮದಲ್ಲಿ ಪುಷ್ಪಾ ನಮನ ಸಲ್ಲಿಸಿ ಮಾತನಾಡಿ, ಸಾಮಾಜಿಕ ಬದಾಲವಣೆಗೆ ಶಿಕ್ಷಣವೇ ಅಸ, ಅದರಲ್ಲಿಯೂ ಮಹಿಳೆಯರು ಸಮಾಜದ ಮುಖ್ಯ ವಾಹಿನಿಯಲ್ಲಿ ಸರಾಗವಾಗಿ ಪಾಲ್ಗೊಂಡು ಮುಖ್ಯ ಪಾತ್ರ ವಹಿಸಲು ಅವರು ಸುಶಿಕ್ಷಿತರಾಗುವ ಅಗತ್ಯವಿದೆ ಎಂದು ಹಲವು ಅಡೆತಡೆಗಳನ್ನು ಎದುರಿಸಿ ಸ್ವಯಂ ಶಿಕ್ಷಕರಾಗಿ ಸಮಾಜ ಬದಲಾವಣೆಗ ಶ್ರಮಿಸಿದರು ಎಂದರು.

ನಿವೃತ್ತ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಸಮನ್ವಯ ಅಧಿಕಾರಿ ಶೇಖರಪ್ಪ, ಸಾವಿತ್ರಿಬಾಯಿಪುಲೆ ಸಂಘದ ಅಧ್ಯಕ್ಷೆ ಸೀತಾಲಕ್ಷ್ಮೀ, ಕಾರ್ಯದರ್ಶಿ ಕವಿತಾ, ಖಜಾಂಚಿ ಸುವರ್ಣ ಒಡೆಯರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net