ಬಡ ಮಕ್ಕಳಿಗೆ ಓದುವ ಅವಕಾಶ ಕಲ್ಪಿಸಿದ ಸಾವಿತ್ರಿಬಾಯಿ ಫುಲೆ

ಬಡ ಮಕ್ಕಳಿಗೆ ಓದುವ ಅವಕಾಶ ಕಲ್ಪಿಸಿದ ಸಾವಿತ್ರಿಬಾಯಿ ಫುಲೆ
Published on

ಎಚ್.ಡಿ. ಕೋಟೆ: ಸಾವಿತ್ರಿಬಾಯಿ ಫುಲೆ ಅವರು 18 ಶಾಲೆಗಳನ್ನು ಆರಂಭಿಸಿ, ಶಾಲೆ ಬಿಟ್ಟ ಮಕ್ಕಳಿಗೆ ಮತ್ತೆ ಓದಲು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರು ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜವರೇಗೌಡ ಸ್ಮರಿಸಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ, ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಫುಲೆ ಅವರು ಅಂದು ಶಾಲೆ ಬಿಟ್ಟ ಮಕ್ಕಳಿಗೆ ಶಾಲೆ ಕಟ್ಟಿದಂತೆ ಇಂದಿನ ಶಿಕ್ಷಕಿಯರು ಶಾಲೆ ಬಿಟ್ಟ ಮಕ್ಕಳು ಮತ್ತೆ ಶಾಲೆಗೆ ಕರೆದುಕೊಂಡು ಬರುವಂತೆ ಮಾಡಬೇಕು. ಶೂನ್ಯ ದಾಖಲಾತಿ ಇರುವ ಶಾಲೆಗಳಿಗೆ ಮತ್ತೆ ದಾಖಲಾತಿ ಆಗುವ ರೀತಿಯಲ್ಲಿ ಗಮನಹರಿಸಬೇಕು. ಹೆಣ್ಣು ಮಕ್ಕಳು ಶಾಲೆ ಬಿಡದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರು ರಾಷ್ಟ್ರದ ಮೊದಲ ಮಹಿಳಾ ಶಿಕ್ಷಕಿಯಾಗಿದ್ದು, ಶಿಕ್ಷಕಿಯರಿಗೆ ಮಾದರಿಯಾಗಿದ್ದರೆ ಎಂದರು.

ತಾಲೂಕಿನಲ್ಲಿ ಶೇ. 80ರಷ್ಟು ಮಹಿಳಾ ಶಿಕ್ಷಕಿಯರಿದ್ದಾರೆ. ಇದರಿಂದ ಮಕ್ಕಳನ್ನು ತಾಯಿಯಂತೆ ಪೋಷಣೆ ಮಾಡಿಕೊಂಡು ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಯುವರಾಜ ಕಾಲೇಜಿನ ಉಪನ್ಯಾಸಕಿ ನಿವೇದಿತಾ ಮಾತನಾಡಿ, ತಾಲೂಕಿನಲ್ಲಿ ಶೇ.80ಕ್ಕೂ ಹೆಚ್ಚಿನ ಮಹಿಳೆಯರು ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು ಅವರೆಲ್ಲರಿಗೂ ಸಹ ಸಾವಿತ್ರಿಬಾಯಿ ಫುಲೆ ಮಾದರಿ ಮಹಿಳೆಯಾಗಿ ನಿಲ್ಲುತ್ತಾರೆ. ಮಹಾರಾಷ್ಟ್ರದಲ್ಲಿ ಇಲ್ಲಿನ ಮಂತ್ರ ಮಾಂಗಲ್ಯದ ರೀತಿ ಮದುವೆಯನ್ನು ಅಲ್ಲಿ ಅಂದೇ ಜಾರಿಗೆ ತಂದಿದ್ದರು. ಆ ಪದ್ಧತಿ ಇಂದಿಗೂ ಸಹ ಜಾರಿಯಲ್ಲಿದೆ ಎಂದರು.

ಇದೇ ವೇಳೆ ಉತ್ತಮ ಸೇವೆ ಸಲ್ಲಿಸಿದ ರೇಖಾಮಣಿ, ಸರಸ್ವತಿ, ಸರೋಜಮ್ಮ, ಕೋಮಲಾ, ಸರಸ್ವತಿ ಅವರಿಗೆ ಮಹಿಳಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕ್ಷೇತ್ರ ಸಮನ್ವಯ ಅಧಿಕಾರಿ ಕೃಷ್ಣಯ್ಯ, ಗೌತಮಿ ಬಂತೇಜಿ, ಸಂಘದ ಅಧ್ಯಕ್ಷೆ ಪ್ರತಿಭಾ, ಕಾರ್ಯದರ್ಶಿ ರೂಪಾ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ್, ಮಿಲ್ ನಾಗರಾಜು, ಸೆಲ್ವಿಯಾ, ವೀಣಾ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷೆ ರಾಜೇಶ್ವರಿ, ಸಿದ್ದರಾಜು, ಭೀಮಪ್ಪ, ಎ.ಎಸ್.ಮಹದೇವು ಭೀಮನಹಳ್ಳಿ, ಸಿದ್ದರಾಜು, ಸೋಮಸುಂದರ್, ಸುಂದ್ರಮ್ಮ, ಜಯರಾಮೇಗೌಡ, ಯಶ್ವಂತ್ ಕುಮಾರ್, ದೀಪಾ, ದೊರೆಸ್ವಾಮಿ, ಪ್ರಮೋದ್, ಕೋಮಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net