

ಕಾಳಗಿ: ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಫೆಡರೇಷನ್, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿAದ ಫುಲೆ ೧೯೪ನೇ ಜಯಂತ್ಯುತ್ಸವ ನಿಮಿತ್ತ ಪ್ರಾಥಮಿಕ, ಪ್ರೌಢ ಶಾಲೆ ಶಿಕ್ಷಕ, ಶಿಕ್ಷಕಿಯರಿಗೆ ಸಾವಿತ್ರಿ ಫುಲೆ, ಜ್ಯೋತಿಬಾ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಹಿಳೆಯರ ಏಳಿಗೆಗೆ ಶ್ರಮಿಸುತ್ತಿರುವ ಶಶಿಕಲಾ ಟೆಂಗಳಿ ಅವರಿಗೆ ಆದರ್ಶ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಹಾಂತೇಶ ಬಡಿಗೇರಗೆ ಸೇವಾ ರತ್ನ ಗೌರವದೊಂದಿಗೆ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ನೂತನಹ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಶ್ರೀ ಪ್ರಶಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮೀಳಾ ದೇವಿ ಶೇರಿಕಾರ್ ಅಧ್ಯಕ್ಷತೆ ವಹಿಸಿದ್ದರು. ಮಲ್ಲಮ್ಮ ಪಾಟೀಲ್, ಮಲ್ಕಮ್ಮ ಮೇಲಕೇರಿ, ಶಿವುಕುಮಾರ ಕಮಕನೂರ, ಗುರುನಾಥ ರಾಠೋಡ್, ಶರಣಗೌಡ ಪಾಟೀಲ್, ಅನೀಲ ಗುತ್ತೇದಾರ, ಶಿವಕುಮಾರ ಶಾಸ್ತಿç , ಮಹಾಂತೇಶ ಬಡಿಗೇರ, ಪ್ರಕಾಶ, ಶ್ರೀದೇವಿರೆಡ್ಡಿ, ಸಾವಿತ್ರಿ ರೂಲೆ ಇತರರಿದ್ದರು. ಸಾವಿತ್ರಿ ರೂಲೆ, ಆರತಿ ಸಾವಳಕರ ನಿರೂಪಣೆ ಮಾಡಿದರು. ಅರುಂಧತಿ ಸ್ವಾಗತಿಸಿದರು. ಮಧುಮತಿ ಟೆಂಗಳಿ, ಅಂಜನ ವೈದ್ಯ ವಂದಿಸಿದರು.