ಸಾವಿತ್ರಿಬಾಯಿ ಶೈಕ್ಷಣಿಕ ಸೇವೆ ಅಪಾರ

5inapur2
Published on

ಐನಾಪುರ: ಇತರರಿಗೆ ಬೆಳಕಾಗುವ ಮೂಲಕ ದೇಶದ ಪ್ರಥಮ ಶಿಕ್ಷಕಿಯಾಗಿ ಸಾವಿತ್ರಿಬಾಯಿ ಫುಲೆ ಕ್ರಾಂತಿ ಮಾಡುವುದರ ಜತೆಗೆ ತೊಟ್ಟಿಲು ತೂಗುವ ಕೈ ಜಗತ್ತನ್ನು ತೂಗಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಅಥಣಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ ಹೇಳಿದರು.

ಪಟ್ಟಣದಲ್ಲಿ ಮಾಳಿ ಸಮುದಾಯ, ಶ್ರೀ ಸಿದ್ಧೇಶ್ವರ ಮಾಳಿ ಸಮಾಜ ಹಾಗೂ ಬಸವಜ್ಯೋತಿ ಪ್ರತಿಷ್ಠಾನದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿುಲೆ ಜಯಂತಿ ಉದ್ಘಾಟಿಸಿ ಮಾತನಾಡಿ, ಬೇದಭಾವವಿಲ್ಲದೆ ಸಮಾನ ಶಿಕ್ಷಣ ನೀಡಿ ಅಕ್ಷರದವ್ವ ಎನಿಸಿಕೊಂಡಿದ್ದಾರೆ ಎಂದರು. ವಕೀಲ ಅಮೋಘಸಿದ್ದ ಖೊಬ್ರಿ ಮಾತನಾಡಿ, ಸಾವಿತ್ರಿಬಾಯಿ ಫುಲೆ, ಡಾ.ಬಾಬಾಸಾಹೇಬ ಅಂಬೇಡ್ಕರ್, ಬಸವಣ್ಣನವರು ನಿಸ್ವಾರ್ಥದಿಂದ ಹಿಂದುಳಿದ ಜನರಿಗಾಗಿ ಜೀವನವನ್ನೇ ತ್ಯಾಗಮಾಡಿದ್ದಾರೆ. ಅಪಮಾನಗಳನ್ನು ಮೆಟ್ಟಿ ನಿಂತು ಎಲ್ಲರಿಗೂ ಸಮಾನ ಶಿಕ್ಷಣ ಒದಗಿಸುವಲ್ಲಿ ಶ್ರಮಿಸಿದ್ದಾರೆ ಎಂದರು.

ಯುವ ಧುರೀಣ ಸದಾಶಿವ ಬುಟಾಳಿ ಹಾಗೂ ಮಾಳಿ ಸಮುದಾಯದ ಅಧ್ಯಕ್ಷ ಸುರೇಶ ಕಾಗಲಿ, ಸಂತೋಷ ಬೆಳಕೂಡ ಮಾತನಾಡಿದರು. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ರಾಮು ಕಾಗಲಿ, ಕೇದಾರಿ ನಾಂದನಿಕರ, ಮುರಗೆಪ್ಪ ಬೆಳಕೂಡ, ಶ್ರೀಶೈಲ ನಾಂದನಿಕರ, ಶಿವಶಂಕರ ಮಳೆಮಠ, ಅಪ್ಪಾಸಾಹೇಬ ಕಾಗಲಿ, ವಿಠ್ಠಲ ಕಾಗಲಿ, ಬಸವರಾಜ ಕಾಗಲಿ, ಶಿವಾನಂದ ಬೆಳಕೂಡ, ರವಿ ಬಡಕಂಬಿ, ಮಾರುತಿ ಜಿರಗಾಳೆ, ಶಿವಾನಂದ ಕಾಗಲಿ, ಬಸವರಾಜ ಜೀರಗಾಳೆ, ಲಕ್ಷ್ಮಣ ಪವಾಡೆ, ಬಸವರಾಜ ಹಳದಮಳ್ಳ, ತಮ್ಮಣ್ಣ ಕಾಗಲಿ, ನಿತೀನ ತೋಡಕರ ಇತರರಿದ್ದರು. ಮಂಜು ಕಾಗಲಿ ಸ್ವಾಗತಿಸಿದರು. ರಾಜು ಮಾಳಿ ನಿರೂಪಿಸಿದರು. ಚೇತನ ಕಾಗಲಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net