

ಮಹಾಲಿಂಗಪುರ: ದೇಶದ ಸ್ವಾತಂತ್ರೃ ಪೂರ್ವದಲ್ಲಿ ಸಂಕಷ್ಟದ ನಡುವೆಯೂ ತಾನು ಅಕ್ಷರ ಕಲಿತು ಭಾರತೀಯ ಮಹಿಳೆಯರಲ್ಲಿ ಅಕ್ಷರ ಬೀಜ ಬಿತ್ತಿ ಸಾಕ್ಷರತಾ ಕ್ರಾಂತಿ ಮಾಡಿದ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಕಾರ್ಯ ಸದಾ ಸ್ಮರಣೀಯ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.
ಸ್ಥಳೀಯ ಮಾಳಿ ಸಮಾಜ ವತಿಯಿಂದ ಪಟ್ಟಣದ ಸಾವಿತ್ರಿಬಾಯಿ ಫುಲೆ ವೃತ್ತದಲ್ಲಿ ಆಯೋಜಿಸಿದ ಸಾವಿತ್ರಿಬಾಯಿ ಫುಲೆ ಆವರ 194 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬದುಕಿನ ಬಂಡಿಯಲ್ಲಿ ಸಾಗುತ್ತಿರುವಾಗ ಏನೆಲ್ಲ ಕಷ್ಟಗಳು ಬರುತ್ತವೆ. ಅವೆಲ್ಲವನ್ನೂ ಧೈರ್ಯವಾಗಿ ಎದುರಿಸಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಈ ಸಮಾಜದಲ್ಲಿ ಒಂದು ಒಳ್ಳೆಯ ಕೆಲಸವನ್ನು ಪ್ರಾರಂಭಿಸಿದಾಗ ಟೀಕೆ-ಟಿಪ್ಪಣಿ ಬರುವುದು ಸಹಜ. ಆದರೆ ಆ ಎಲ್ಲ ಟೀಕೆಗಳಿಗೆ ಸರಿಯಾದ ರೀತಿಯಲ್ಲಿ ಉತ್ತರ ಕೊಡುವ ಛಾತಿ ಯಾರಲ್ಲಿ ಇರುತ್ತದೆಯೋ ಅವರು ಬದುಕಿನ ಪಯಣದಲ್ಲಿ ಅಂದುಕೊಂಡ ಗುರಿ ಈಡೇರಿಸುತ್ತಾರೆ. ಕೊನೆಗೆ ಯಾವ ಸಮಾಜದಿಂದ ನಿಂದನೆಗೆ ಒಳಗಾಗಿರುತ್ತಾರೋ ಅದೇ ಸಮಾಜದಿಂದ ಗೌರವವನ್ನು ಗಳಿಸುತ್ತಾರೆ. ನಮ್ಮ ಸಮಾಜಕ್ಕೆ ದುಡಿದ ಅನೇಕ ಮಹನೀಯರು ಇದೇ ರೀತಿ ಕಲ್ಲು ಮುಳ್ಳುಗಳ ಹಾದಿಯಲ್ಲಿ ಸಾಗಿರುವ ಸಾವಿರಾರು ನಿದರ್ಶನಗಳಿವೆ. ಅದರಲ್ಲಿ ನಮ್ಮ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಒಬ್ಬರು ಎಂದರು.
ಪುರಸಭೆ ಸದಸ್ಯ ಶೇಖರ ಅಂಗಡಿ ಮಾತನಾಡಿ, ಆಗಿನ ಬ್ರಿಟಿಷ್ ಸರ್ಕಾರ ಸಾವಿತ್ರಿಬಾಯಿ ಸಾಧನೆ ಗಮನಿಸಿ ಫಸ್ಟ್ ಲೇಡಿ ಟೀಚರ್ ಆಫ್ ಇಂಡಿಯಾ ಎಂಬ ಬಿರುದು ನೀಡಿತ್ತು ಎಂದರು. ಪುರಸಭೆ ಸದಸ್ಯ ಯಲ್ಲನಗೌಡ ಪಾಟೀಲ,ನಿಂಗಪ್ಪ ಬಾಳಿಕಾಯಿ ಮಾತನಾಡಿದರು.
ಪುರಸಭೆ ಸದಸ್ಯ ರಾಜು ಚಮಕೇರಿ, ಬಲವಂತಗೌಡ ಪಾಟೀಲ, ಮುಖಂಡರಾದ ಕೃಷ್ಣಗೌಡ ಪಾಟೀಲ, ಅಶೋಕ ಅಂಗಡಿ, ಮಹಾಲಿಂಗ ಮಾಳಿ, ಮಲ್ಲಪ್ಪ ಭಾವಿಕಟ್ಟಿ, ಜಿ ಎಸ್ ಗೊಂಬಿ, ರಾಜೇಶ ಬಾವಿಕಟ್ಟಿ, ಮಾನಿಂಗಪ್ಪ ಬಾಳಿಕಾಯಿ, ವಿಜುಗೌಡ ಪಾಟೀಲ, ಈರಪ್ಪ ಮಾಳಿ, ಶ್ರೀಶೈಲ ಮಾಳಿ, ಶಿವಪ್ಪ ಮಾಳಿ, ಕಾಳಪ್ಪ ಮಾಳಿ, ರುದ್ರಪ್ಪ ರಾಮದುರ್ಗ, ಚಿದಾನಂದ ಬಾಳಿಕಾಯಿ, ರವೀಂದ್ರ ಬಡಕಂಬಿ, ಅರ್ಜುನ ದೊಡಮನಿ, ಬಸು ನಿಪ್ಪನಾಳ, ಪ್ರಭು ಮಲಾಬದಿ, ಚನ್ನಪ್ಪ ಬಾಳಿಕಾಯಿ, ಶ್ರೀಕಾಂತ ಮಾಳಿ ಹಲವರು ಇದ್ದರು.