ಸಾವಿತ್ರಿ ಭಾಪುಲೆ ಭಾವಚಿತ್ರ ಕಡ್ಡಾಯಕ್ಕೆ ಒತ್ತಾಯ

19 ckm 4
ಚಿಕ್ಕಮಗಳೂರು ಎಸಿ ದಲ್ಜಿತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ ಡಿಎಸ್‌ಎಸ್ ಕಾರ್ಯಕರ್ತರು ಎಲ್ಲ ಕಚೇರಿಗಳಲ್ಲಿ ಸಾವಿತ್ರ ಬಾಪುಲೆ ಅವರ ಭಾವಚಿತ್ರ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು. ಕಬ್ಬಿಕೆರೆ ಮೋಹನ್ ಕುಮಾರ್, ಕೆ.ಎಚ್.ದೇವರಾಜ್, ಗೀತಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಭಾಪುಲೆರವರ ಭಾವಚಿತ್ರವನ್ನು ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಹಾಕಬೇಕು ಹಾಗೂ ಸರ್ಕಾರಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಇರಿಸಬೇಕು ಎಂದು ಡಿಎಸ್‌ಎಸ್ ಮುಖಂಡರು ಸೋಮವಾರ ಎಸಿ ದಲ್ಜಿತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್, ಸಂಘಟನಾ ಸಂಚಾಲಕ ಕೆ.ಎಚ್.ದೇವರಾಜ್, ತಾಲೂಕು ಮಹಿಳಾ ಸಂಚಾಲಕಿ ಗೀತಾ, ಮುಖಂಡರಾದ ಪ್ರಕಾಶ್, ರಜನಿಕಾಂತ್, ಟಿ.ಎಲ್.ಗಣೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net