

ವಿಜಯವಾಣಿ ಸುದ್ದಿಜಾಲ ಗದಗ
ಸರ್ಕಾರಿ ವಸತಿ ನಿಲಯಗಳಿಗೆ ಸಾವಿತ್ರಿಬಾಯಿ ಪುಲೆ ಹೆಸರನ್ನು ನಾಮಕರಣ ಮಾಡಬೇಕು ಎಂದು ದಲಿತ ಸಂರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬಾಲರಾಜ ಅರಬರ ಹೇಳಿದರು.
ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಗುರುವಾರ ಜರುಗಿದ ಸಾವಿತ್ರಿಬಾಯಿ ಪುಲೆ ಅವರ 193ನೇ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವಿತ್ರಿ ಬಾಯಿ ಪುಲೆ ಅವರು ಭಾರತದ ಮೊದಲ ಮಹಿಳಾ ಶಿಕಿ, ಮಹಿಳೆಯರ ಶಿಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟಿದ್ದರು. ಈ ಹಿನ್ನೆಲೆ ರಾಷ್ಟ್ರ ಹಾಗೂ ರಾಜ್ಯದಲ್ಲಿರುವ ಸರ್ಕಾರಿ ವಸತಿ ನಿಲಯಗಳಿಗೆ ಸರ್ಕಾರ ಅವರ ಹೆಸರು ನಾಮಕರಣ ಮಾಡಬೇಕೆಂದು ತಿಳೀಸಿದರು.
ಸಮಿತಿ ಸದಸ್ಯ ಮುತ್ತಪ್ಪ ಭಜಂತ್ರಿ ಮಾತನಾಡಿ, ಸಾವಿತ್ರಿಬಾಯಿ ಪುಲೆಯವರು ಸಮಾಜದಿಂದ ಅವಮಾನ ಸಹಿಸಿ ಶಿಣ ಪಡೆದು ಮಹಿಳೆಯರ ಶಿಣಕ್ಕಾಗಿ ತಮ್ಮನ್ನು ತಾವು ಅಪಿರ್ಸಿಕೊಂಡವರು. ನಮ್ಮ ದೇಶದ ಮಹಿಳೆಯರಿಗೆ ಅರವನ್ನು ಕಲಿಸಿ ಅರದ ಅವ್ವ ಎಂದು ಬಿರುದು ಪಡೆದರು ಎಂದರು.
ಕೆಂಚಪ್ಪ ಮ್ಯಾಗೇರಿ ಮಾತನಾಡಿ, ಹೆಣ್ಣುಮಕ್ಕಳಿಗೆ ಶಿಕ್ಷಣ ದೊರೆತ ಕಾರಣದಿಂದ ಇಂದು ಹೆಣ್ಣ ಗಂಡು ನಡುವೆ ಸಮಾನತೆ ಇದೆ. ಇದಕ್ಕೆ ಸಾವಿತ್ರಿ ಬಾಯಿ ಪುಲೆ ಅವರ ಪರಿಶ್ರಮ ಕಾರಣ ಎಂದರು.
ಮಂಜುಳಾ ಕಲಿಕೇರಿ, ನಾಗರಾಜ್ ಗೋಕಾವಿ, ಸುಜಾತಾ ಪಾಟೀಲ್, ಮಂಜುಳಾ ಕಲಕೇರಿ, ರತ್ನ ಚಂಡೂರು, ರವಿ ನಿಡಗುಂದಿ, ಹನುಮಂತ ಕಿರಿಟಗೇರಿ ಇತರರು ಇದ್ದರು.