ಮಹಿಳಾ ಶಿಕ್ಷಣಕ್ಕೆ ಶ್ರಮಿಸಿದ ಸಾವಿತ್ರಿ ಬಾಪುಲೆ

03bhr 1
Published on

ಬಾಳೆಹೊನ್ನೂರು: ಮಹಿಳೆಯರ ಶಿಕ್ಷಣಕ್ಕಾಗಿ ಶ್ರಮಿಸಿದ್ದ ಸಾವಿತ್ರಿ ಬಾಪುಲೆ ಅವರ ಸೇವೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಎಸ್‌ಜೆಆರ್ ಕಾಲೇಜಿನ ಪ್ರಾಚಾರ್ಯ ಕೆ.ಆರ್.ಭೂದೇಶ ಹೇಳಿದರು.

ಪಟ್ಟಣದ ಎಸ್‌ಜೆಆರ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾವಿತ್ರಿ ಬಾಪುಲೆ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಾವಿತ್ರಿ ಬಾಪುಲೆ ಅವರ ಜೀವನ ಚರಿತ್ರೆ ಎಲ್ಲರಿಗೂ ಮಾದರಿಯಾಗಿದ್ದು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನುಡಿಯನ್ನು ಪಾಲಿಸಿದ ಏಕೈಕ ವ್ಯಕ್ತಿ ಹಾಗೂ ಅದರ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

ಉಪನ್ಯಾಸಕ ಕೆ.ಎಂ.ರಾಕೇಶ್ ಮಾತನಾಡಿ, ಸಾವಿತ್ರಿ ಬಾಪುಲೆ ಅವರು ಹೇಳಿದಂತೆ ಈ ಸಮಾಜದ ಮುಖ್ಯ ಶತ್ರು ಅಜ್ಞಾನ ಅದನ್ನು ನಾವೆಲ್ಲರೂ ಕೂಡಿ ಓಡಿಸಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ಸಾವಿತ್ರಿ ಬಾಪುಲೆಯವರ ಸಾಧನೆ, ಮಹಿಳಾ ಶಿಕ್ಷಣಕ್ಕಾಗಿ ನೀಡಿದ ಕೊಡುಗೆ ಹಾಗೂ ಸಮಾಜ ಸೇವೆಗೆ ನೀಡಿದ ಪರಿಶ್ರಮ ಗಮನಿಸಿ ಅವರ ಜನ್ಮದಿನವನ್ನು ಮಹಿಳಾ ಶಿಕ್ಷಕರ ದಿನವಾಗಿ ಆಚರಿಸಲು ಕರೆ ನೀಡಿದೆ ಎಂದರು.

ಎಸ್‌ಜೆಆರ್ ಪ್ರೌಢಶಾಲೆ ಹಿರಿಯ ಶಿಕ್ಷಕ ಕುಮಾರ್ ಚಂದ್ರನಾಯಕ್, ದೈಹಿಕ ಶಿಕ್ಷಣ ಶಿಕ್ಷಕ ಉಮಾಶಂಕರ್, ಅರವಿಂದ್, ಶಿಕ್ಷಕಿಯರಾದ ರಮಾಮಣಿ, ಲತಾ, ಸುಜಾತ, ಇಂಚರ, ಸಿಬ್ಬಂದಿಗಳಾದ ಜರ‌್ರಿ ಜೇಮ್ಸ್, ಮುತ್ತುಕುಮಾರ್, ಜ್ಯೋತಿಶ್ರೀ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net