ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯ

udp-6-savitha samaja
Published on

ಉಡುಪಿ: ಜಿಲ್ಲಾ ಸವಿತಾ ಸಮಾಜವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯ. ಹಿರಿಯರನ್ನು ಗೌರವಿಸುವುದು ಸಂಟನೆಗಳಿಗೆ ಮಾದರಿ ಎಂದು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರಕೂರಿನ ಮಾಜಿ ಆಡಳಿತ ಮೊಕ್ತೇಸರ ವಿಶ್ವನಾಥ್​ ಭಂಡಾರಿ ಹೇಳಿದರು. 

ಅಂಬಲಪಾಡಿ ಸವಿತಾ ಸಮುದಾಯ ಭವನದಲ್ಲಿ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು "ಸವಿತಾ ಸ್ವಚ್ಛ ಸೆಲೂನ್​ ಜಿಲ್ಲಾ ಪ್ರಶಸ್ತಿ' ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ಈ ಸಂದರ್ಭದಲ್ಲಿ  75 ವರ್ಷ ಮೇಲ್ಪಟ್ಟ ಸವಿತಾ ಸಮಾಜದ ಕ್ಷೌರಿಕ ವೃತ್ತಿ ನಿರತರಿಗೆ "ಸವಿತಾ ಹಿರಿಯ ವೃತ್ತಿ ಬಾಂಧವ ಜಿಲ್ಲಾ ಪ್ರಶಸ್ತಿ' ಪ್ರದಾನ ಮಾಡಲಾಯಿತು. 

ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ್​ ಭಂಡಾರಿ ನಿಂಜೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪರಿಯಾಳ ಸಮಾಜ ಸುಧಾರಕ ಸಂದ ಅಧ್ಯಕ್ಷ  ಶಂಕರ್​ ಸಾಲಿಯಾನ್​ ಭಂಡಾರಿ, ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂದ ಅಧ್ಯಕ್ಷ ನವೀನ್​ಚಂದ್ರ ಭಂಡಾರಿ, ಜಿಲ್ಲಾ ಸವಿತಾ ಸಮಾಜದ ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ತಾಲೂಕು ಅಧ್ಯಕ್ಷರಾದ ರಾಜು ಭಂಡಾರಿ ಕಿನ್ನಿಮೂಲ್ಕಿ, ನಾಗೇಶ್​ ಭಂಡಾರಿ ಬಜಗೋಳಿ, ಶಿವರಾಮ್​ ಭಂಡಾರಿ ಹಂದಾಡಿ, ರತನ್​ ಸಾಲಿಯಾನ್​ ಕಾಪು, ಮಧುಕರ್​ ಭಂಡಾರಿ ಕೋಟೇಶ್ವರ, ಪ್ರಶಾಂತ್​ ಭಂಡಾರಿ ಬೈಂದೂರು, ಸುರೇರ್ಶ ಭಂಡಾರಿ ಹೆಬ್ರಿ ಉಪಸ್ಥಿತರಿದ್ದರು. ಮಂಜುನಾಥ್​ ಪಡುಕರೆ ನಿರೂಪಿಸಿ, ಸುಧಾಕರ್​ ಭಂಡಾರಿ ಸ್ವಾಗತಿಸಿ, ಸದಾಶಿವ ಕುರ್ಕಾಲು ಪ್ರಸ್ತಾವನೆಗೈದರು. ಹರೀಶ್​ ಭಂಡಾರಿ ಕರಂಬಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net