ವಿಶ್ವ ಕ್ಷೌರಿಕರ ದಿನಾಚರಣೆ ಅಂಗವಾಗಿ ವೃದ್ಧಾಶ್ರಮದಲ್ಲಿ ಅನ್ನಸಂತರ್ಪಣೆ

20krp-03
Published on

ಕೆ.ಆರ್.ಪೇಟೆ: ತಾಲೂಕು ಸವಿತಾ ಸಮಾಜದ ಸಂಘದ ವತಿಯಿಂದ ವಿಶ್ವ ಕ್ಷೌರಿಕರ ದಿನದ ಅಂಗವಾಗಿ ಹೇಮಗಿರಿ ರಸ್ತೆಯಲ್ಲಿರುವ ಮಾತೃ ಭೂಮಿ ವೃದ್ಧಾಶ್ರಮದ ನಿವಾಸಿಗಳಿಗೆ ಅನ್ನಸಂತರ್ಪಣೆ ಮತ್ತು ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶೀಳನೆರೆ ಹೋಬಳಿ ಘಟಕದಿಂದ ಶಾಲಾ ಮಕ್ಕಳಿಗೆ ಉಚಿತ ಕ್ಷೌರ ಸೇವೆ ಮಾಡಲಾಯಿತು.
ತಾಲೂಕು ಅಧ್ಯಕ್ಷ ಸಂತೇಬಾಚಹಳ್ಳಿ ಮಂಜುನಾಥ್, ಕಾರ್ಯದರ್ಶಿ ಬಲ್ಲೇನಹಳ್ಳಿ ಸತ್ಯಮೂರ್ತಿ ಬಿ ವಿ, ಮಾಜಿ ಅಧ್ಯಕ್ಷ ಮೋದೂರು ಸುರೇಶ್, ಉಪಾಧ್ಯಕ್ಷ ಎಂ.ಕೆ ಶೇಖರ್, ಖಜಾಂಚಿ ಅಕ್ಕಿಹೆಬ್ಬಾಳು ಲೋಕೇಶ್, ಸದಸ್ಯರಾದ ಲೋಕೇಶ್, ಚೇತನ್, ರಾಜಣ್ಣ, ಶೀಳನೆರೆ ಘಟಕ ಅಧ್ಯಕ್ಷ ನಟರಾಜು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net