ಬಿಪಿಎಲ್ ಕಾರ್ಡ್​ನ ಮಾನದಂಡ ಕೈ ಬಿಡಿ

SAVITA
Published on

ಯಾದಗಿರಿ: ಲಾಕ್ಡೌನ್ನಿಂದಾಗಿ ಕ್ಷೌರಿಕರಿಗೆ ಸರ್ಕಾರ ನೀಡುವ ಐದು ಸಾವಿರ ರೂ. ಪರಿಹಾರಧನ ವಿತರಣೆಗೆ ಬಿಪಿಎಲ್ ಕಾರ್ಡ್​ ಮಾನದಂಡ ಮಾಡಿರುವುದನ್ನು ಕೈಬಿಡಬೇಕು ಎಂದ ಒತ್ತಾಯಿಸಿ ರಾಜ್ಯ ಸವಿತಾ ಸಮಾಜ ಸಂಘ ಜಿಲ್ಲಾ ಘಟಕದಿಂದ ಶನಿವಾರ ಇಲ್ಲಿನ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಲಾಕ್ಡೌನ್ನಿಂದ ಕ್ಷೌರಿಕರಿಗೆ ತೊಂದರೆಯಾಗಿದ್ದನ್ನು ಮನಗಂಡ ಮುಖ್ಯಮಂತ್ರಿಗಳು ರಾಜ್ಯದ 2.30 ಲಕ್ಷ ಕ್ಷೌರಿಕರಿಗೆ 5000 ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಅಧಿಕಾರಿಗಳು ಕಾಮರ್ಿಕ ಇಲಾಖೆ ಮಾನದಂಡ ಬಳಸುವ ಬದಲು ಬಿಪಿಎಲ್ ಕಾಡರ್್ ಮಾನದಂಡ ಬಳಸಲು ಮುಂದಾಗಿರುವುದು ಮುಖ್ಯಮಂತ್ರಿಗಳ ಆದೇಶಕ್ಕೆ ವಿರುದ್ಧವಾಗಿದೆ. ಬಿಪಿಎಲ್ ಕಾಡರ್್ ಕಡ್ಡಾಯವಾಗಿಸಿದರೆ ಬಹುತೆಕ ಬಡ ಕುಟುಂಬಗಳು ಈ ಸೌಲಭ್ಯದಿಂದ ವಂಚಿತರಾಗುತ್ತೇವೆ. ಆದ್ದರಿಂದ ಗುರುತಿನ ಚೀಟಿ, ಆಧಾರ್ ಕಾರ್ಡ್​, ಬ್ಯಾಂಕ್ ಪಾಸ್ ಬುಕ್ಗಳು ಆಧರಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅಜರ್ಿ ಸಲ್ಲಿಸುವ ದಿನಾಂಕವನ್ನು 25ರವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಸಮಾಜದ ಜಿಲ್ಲಾಧ್ಯಕ್ಷ ಅಪ್ಪಣ್ಣ ಚಿನ್ನಾಕಾರ್, ಮಲ್ಲಣ್ಣ ವಡಗೇರಿ, ನಾಗಪ್ಪ ಹತ್ತಿಕುಣಿ, ವಿಶ್ವನಾಥ ಬಸವನಗುಡಿ, ಗೋಪಾಲ ಕಿಲ್ಲೇದ, ಬಸವರಾಜ ಹೊಸಮನಿ, ರಮೇಶ ಹಕೀಂ, ಅಶೋಕ ಗೌನಳ್ಳಿ, ಅಣಬಣ್ಣ ಹೋರುಂಚಾ, ಮಂಜುನಾಥ ಕಿಲ್ಲೇದ, ಮಲ್ಲು ಮಲ್ಹಾರ, ರಮೇಶ ಹಕೀಂ, ಮಂಜುನಾಥ ಕಿಲ್ಲೇದ, ಅಂಜು ಬಸನಗುಡಿ, ನಾಗರಾಜ ಹೊಸಮನಿ, ರಾಘು ಹೊಸಮನಿ, ಶ್ರೀನಿವಾಸ ಕಲ್ಮನಿ, ರಾಘವೇಂದ್ರ ದಾಂಡೇಲಿ, ವೀರೇಶ ರಾಯಚೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net