ಸವಿತಾ ಮಹರ್ಷಿ ಜಯಂತಿಗೆ ರಾಜಕಾರಣಿಗಳು ಗೈರು: ಕೃಷ್ಣಾ ಹಡಪದ ವಿಷಾದ

1708243789811
Published on

ಗದಗ: ಆಹ್ವಾನ ಪತ್ರಿಕೆಯಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ರಾಜಕಾರಣಿಗಳ ಹೆಸರು ಇದ್ದರೂ ಅವರಲ್ಲಿ ಒಬ್ಬರೂ ಸಹ ಬರದೆ ಎಲ್ಲ ರಾಜಕಾರಣಿಗಳು ಗೈರು ಇರುವುದರ ಬಗ್ಗೆ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ (ಬುದೂರ) ಬಹಳ ಮತ್ತು ತೀವ್ರವಾಗಿ ಬೇಸರ ವ್ಯಕ್ತಪಡಿಸಿದರು.

ನಗರದ ಗದಗ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗದಗ ಜಿಲ್ಲಾ ಸವಿತಾ ಸಮಾಜದ ಸಹಯೋಗದಿಂದ ಶುಕ್ರವಾರದಂದು ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಆಹ್ವಾನ ಪತ್ರಿಕೆಯಲ್ಲಿ ಗದಗ ಜಿಲ್ಲೆಯ ಎಲ್ಲಾ ತಾಲೂಕಿನ ಶಾಸಕರು, ಎಂ ಎಲ್ ಸಿ, ಹಾಗೂ ಸಂಸದರ ಹೆಸರು ನಮೋದಿಸಲಾಗಿದೆ. ಇವರೆಲ್ಲಾ ರಾಜಕಾರಣಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೇ ನಮ್ಮ ಸಮಾಜದ ಬಹುದಿನಗಳಿಂದ ಬೇಕು ಬೇಡಿಕೆಗಳ ಬಗ್ಗೆ ಮತ್ತು ಸಮಾಜದ ಅನೇಕ ಸಮಸ್ಯೆಯನ್ನು ಅವರ ಬಳಿ ತೋಡಿಕೊಳ್ಳಲು ಅವಕಾಶ ದೊರಕುತ್ತಿತ್ತು ಇದು ನಮ್ಮ ದುರದೃಷ್ಟ ಹಿಗಾದರೆ ನಮ್ಮ ಗೋಳನ್ನು ಯಾರ ಬಳಿ ಹೇಳಿಕೊಳ್ಳುವುದು ಎಂದು ತಮ್ಮ ಅಳಲನ್ನು ತೋಡಿಕೊಂಡ ಕೃಷ್ಣಾ ಎಚ್ ಹಡಪದ (ಬುದೂರ) ಮುಂದುವರಿದು ಮಾತನಾಡಿ ಹಿಂದುಳಿದ ಶೋಷೀತ ಹಾಗೂ ಬಡ ಸವಿತಾ ಸಮಾಜದ ಮೇಲೆ ಅಭೀಮಾನ ಮತ್ತು ನಮ್ಮ ಸಮಾಜದ ಆರಾಧ್ಶ ದೈವ ಶ್ರೀ ಸವಿತಾ ಮಹರ್ಷಿಗಳ ಬಗ್ಗೆ ಗೌರವ ಇದ್ದು ಕಾರ್ಯಕ್ರಮಕ್ಕೆ ಬರೂವವರಿಗೆ ಮಾತ್ರ ಆಮಂತ್ರಣ ಪತ್ರಿಕೆಯಲ್ಲಿ ಅಂತವರ ರಾಜಕಾರಣಿಗಳ ಹೆಸರು ಮಾತ್ರ ಪ್ರಕಟಿಸಿ  ಅಭೀಮಾನ ಮತ್ತು ಗೌರವ ನೀಡದ ಎಸ್ಟೆ ದೊಡ್ಡ ರಾಜಕಾರಣಿಗಳು ಅಧೀಕಾರಿಗಳು ಇದ್ದರು ಸಹ ಮುಲಾಜಿಲ್ಲದೆ ಅಂತವರ ಹೇಸರು ಆಮಂತ್ರಣ ಪತ್ರಿಕೆಯಲ್ಲಿ ಇನ್ಮೂಂದೆ ನಮೋದಿಸಬಾರದು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ (ಬುದೂರ) ಅವರು ವೇದಿಕೆ ಮೂಲಕ ಗದಗ ಜಿಲ್ಲಾಧೀಕಾರಿಗಳಿಗೆ ಮನವಿ ಮಾಡಿ ಆಗ್ರಹಿಸಿದ್ದಾರೆ 

ಸವಿತಾ ಸಮಾಜದ ಹಿರಿಯರಾದ ದಾವಣಗೇರಿ ವೇಂಕಟೇಶ ಅವರು ಮಾತನಾಡಿ ಕಾರ್ಮಿಕ ಇಲಾಖೆಯ ಮೂಲಕ ಈಗಾಗಲೇ ನಮ್ಮ ಸವಿತಾ ಸಮಾಜದ ಬಹುತೇಕ ಕ್ಷೌರಿಕ ಕಾರ್ಮಿಕರಿಗೆ ಸ್ಮಾರ್ಟ ಕಾರ್ಡುಗಳನ್ನು ಮಾಡಿಕೊಟ್ಟದ್ದಕ್ಕೆ ಸರ್ಕಾರಕ್ಕೆ ಕೃತಜ್ಞತೆಗಳು ಅದರಂತೆ ಕಟ್ಟಡ ಕಾರ್ಮಿಕರಿಗೆ ದೊರಕುತ್ತಿರುವ ಎಲ್ಲಾ ಸೌಲಭ್ಯಗಳು ನಮ್ಮ ಸವಿತಾ ಸಮಾಜದ ಕ್ಷೌರಿಕರಿಗೂ ವಿಸ್ತರಿಸಬೇಕೆಂದು ಸರಕಾರಕ್ಕೆ ಮನವಿ ಮಾಡಿದರು

ಕಾರ್ಯಕ್ರಮದಲ್ಲಿ ಗದಗ ಜಿಲ್ಲಾಧೀಕಾರಿಗಳಾದ ವೈಶಾಲಿ ಎಂ ಎಲ್ ಅವರು ಸವಿತಾ ಮರ್ಹಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ,ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ ಸವಿತಾ ಮಹರ್ಷಿಗಳು ಆದರ್ಶ ಪ್ರಾಯ ಜೀವನ ನಡೆಸುವ ಮೂಲಕ ನಮ್ಮ ಗಳ ಸುಂದರ ಬದುಕಿಗೆ ಮಾರ್ಗದರ್ಶಕ ರಾಗಿದ್ದರು ಎಂದು ತಿಳಿಸಿದರು,

ಶೀಕ್ಷಕರಾದ ಕಿಶೋರ ನಾಗರಕಟ್ಟಿ ಇನೋರ್ವ ಶೀಕ್ಷಕರಾದ ಆನಂದ ರಾಂಪೂರ ಅವರು ಜಂಟಿಯಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಪುರಾಣ ಗ್ರಂಥಗಳ ಪ್ರಕಾರ ಸವಿತಾ ಮಹರ್ಷಿ ದೇವ ದೇವತೆಗಳ ಆಯುಷ್ಕರ್ಮ ಸೇವೆಯನ್ನು ಮಾಡುತ್ತಿದ್ದರೆಂದು ಕಾಶಿ ಕ್ಷೇತ್ರದಲ್ಲಿ ದೊರೆತ ಮಹಾಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಸವಿತಾ ಮಹರ್ಷಿಯು ರಥಸಪ್ರಿಯ ದಿನ ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದರು. ಧಾರ್ಮಿಕವಾಗಿ ಶಿವನ ಎಡಗಣ್ಣನ್ನು ಚಂದ್ರನಿಗೆ ಬಲಗಣ್ಣನ್ನು ಸೂರ್ಯನಿಗೆ ಹೊಲಿಸಲಾಗುತ್ತದೆ. ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂದು ಪ್ರತಿತಿಯಿದೆ. ಎಂದರು.

ಸವಿತಾ ಸಮಾಜದ ರಾಜ್ಶ ನಾಯಕರಾದ ಹನಮಂತಪ್ಪ ರಾಂಪೂರ. ಯಲ್ಲಪ್ಪ ನಾವ್ಹಿ. ನವೀನ ಕೊಟೇಕಲ್ಲ ಅವರು ಮಾತನಾಡಿ ಅಪಾರ ಜ್ಞಾನಭಂಡಾರ ಹೊಂದಿದ ಸವಿತಾ ಮಹರ್ಷಿಗಳು ನಾಲ್ಕನೇ ವೇದವಾದ ಸಾಮವೇದ ಕೃತಿ ರಚಿಸಿದ್ದಾರೆ ಎಂದು ಮಾತನಾಡಿದರು ವಕೀಲರಾದ ಹರೀಷ ರಾಂಪೂರ ಸ್ವಾಗತಿಸಿದರು ಆನಂದ ಮಾನೆ ನಿರೂಪಿಸಿದರು ಪರಶುರಾಮ ಬಳ್ಳಾರಿ ವಂದನಾರ್ಫಣೆ ಗೈದರು. ಈ ಸಂದರ್ಭದಲ್ಲಿ ಗದಗ ಬೆಟಗೇರಿ ಸವಿತಾ ಸಮಾಜಗಳ ಐದು ದೈವಗಳ ಅಧ್ಶಕ್ಷರುಗಳು ಮತ್ತು ಮರಾಠ ಕ್ಷೌರಿಕ ಸಮಾಜಗಳ ಅಧ್ಶಕ್ಷರುಗಳು  ಗದಗ ಜಿಲ್ಲೆಯ ಶೀಗ್ಲಿ ಗ್ರಾಮ ಸೇರಿದಂತೆ ಶೀರಹಟ್ಟಿ. ನರಗುಂದ. ಮುಂಡರಗಿ. ಲಕ್ಷ್ಮೇಶ್ವರ ತಾಲ್ಲೂಕುಗಳ ಅಧ್ಶಕ್ಷರುಗಳು ಕ್ರೀಡಾ ಪಟುಗಳು ಸಮಾಜದ ಹಿರಿಯರು ಯುವಕರು ಮತ್ತು ಜಿಲ್ಲೆಯ ಸಮಸ್ತ ಸವಿತಾ ಬಾಂಧವರು ಭಾಗವಹಿಸಿ ಶ್ರೀ ಸವಿತಾ ಮಹರ್ಷಿಗಳ ಕೃಫೆಗೆ ಪಾತ್ರರಾದರು ಎಂದು ಸುನೀಲ ರಾಯಚೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net