

ನ್ಯಾಮತಿ: ಸವಿತಾ ಮಹರ್ಷಿ ಅವರು ಬಹುಕಾಲದಿಂದಲೂ ಸಮಾಜಕ್ಕೆ ಉತ್ತಮ ಕಾಯಕ ನಿಷ್ಠೆ ಬೋಧಿಸಿದ್ದಾರೆ. ಹಾಗಾಗಿ ಎಲ್ಲರೂ ಅವರ ತತ್ವಗಳನ್ನು ಪಾಲಿಸೋಣ ಎಂದು ನಿವೃತ್ತ ಶಿಕ್ಷಕ ಮತ್ತು ಸವಿತಾ ಸಮಾಜದ ಮುಖಂಡ ಆರ್. ಯತಿರಾಜ್ ಹೇಳಿದರು.
ಪಟ್ಟಣದ ತಾಲೂಕು ಆಡಳಿಯ ಕಚೇರಿ ಆವರಣದಲ್ಲಿ ಬುಧವಾರ ತಾಲೂಕು ಆಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಸವಿತಾ ಸಮಾಜವು ಸೇವಾ ಸಮಾಜಕ್ಕೆ ಕೊಡುಗೆ ನೀಡಿದೆ. ಕಾಯಕ ನಿಷ್ಠೆಯಿಂದ ಸಮಾಜ ಸೇವೆ ಮಾಡುವ ಮೂಲಕ ಪೌರಾಣಿಕ, ಐತಿಹಾಸಿಕವಾಗಿ ಗುರುತಿಸಿಕೊಂಡಿದೆ ಎಂದರು.
ಮುಖಂಡ ರಾಮು ಮಾತನಾಡಿ, ಸರ್ಕಾರವು ಸವಿತಾ ಸಮಾಜದ ಮಕ್ಕಳ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಅಭಿವೃದ್ಧಿ ಮಾಡಬೇಕಿದೆ ಎಂದರು.
ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ತಹಸೀಲ್ದಾರ್ ಎಚ್.ಬಿ. ಗೋವಿಂದಪ್ಪ ಹಾಗೂ ಸವಿತಾ ಸಮಾಜದ ಮುಖಂಡರು ಪುಷ್ಪಾರ್ಚನೆ ಮಾಡಿದರು.
ಶಿರಸ್ತೇದಾರ್ ಕೆಂಚಮ್ಮ, ಸವಿತಾ ಸಮಾಜದ ಅಧ್ಯಕ್ಷ ಎನ್.ಆರ್. ಬಾಲರಾಜ್, ಎನ್.ಬಿ. ಬಾಲರಾಜ್, ಎನ್.ಆರ್. ಕೃಷ್ಣಾ, ಎನ್.ಜಿ.ನಾಗೇಶ್, ಎಲ್. ಆಂಜನೇಯ, ಮಾಜಿ ಅಧ್ಯಕ್ಷೆ ರೇಣುಕಮ್ಮ, ಸುಜಾತಾ, ಜ್ಯೋತಿ, ನಾಗರಾಜ್, ಪ್ರಕಾಶ್, ವೆಂಕಟೇಶ್, ಮಲ್ಲೇಶ್, ಕಮಲಾಕ್ಷಮ್ಮ, ಗಿರೀಶ್ ಹಾಗೂ ಕಚೇರಿ ಸಿಬ್ಬಂದಿ ಇದ್ದರು.