

ನಂಜನಗೂಡು: ರಾಷ್ಟ್ರೀಯ ಹಬ್ಬಗಳ ಆಚರಣೆ ವತಿಯಿಂದ ತಾಲೂಕು ಆಡಳಿತ ಭವನದಲ್ಲಿ ಬುಧವಾರ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಿಸಲಾಯಿತು.
ತಹಸೀಲ್ದಾರ್ ಗ್ರೇಡ್ 2 ಮಹೇಶ್‌ಕುಮಾರ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹರ್ಷಿಗಳು ಸಂಗೀತ ಹಾಗೂ ಆಯುರ್ವೇದಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಯಾವ ವೃತ್ತಿಯೂ ಕೀಳು, ಮೇಲು ಎಂಬ ಭೇದಭಾವ ಇಲ್ಲ. ವೃತ್ತಿ ಎಂದರೆ ಅದು ಒಂದು ಕೆಲಸ ಅಷ್ಟೇ. ಕೆಲವು ಕಂಪನಿಗಳು ಬಂಡವಾಳವನ್ನು ಹಾಕಿ ಸಮಾಜದ ಜನರನ್ನು ದುಡಿಸಿಕೊಂಡು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿವೆ. ಹೀಗಾಗಿ ವೃತ್ತಿ ಬಾಂಧವರು ಮುಂದೆ ಬರಬೇಕು ಎಂದರೆ ಮೊದಲು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಮಹಾನ್ ವ್ಯಕ್ತಿಗಳ ತತ್ವ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಜಯಂತಿ ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುಡಿಕಟ್ಟೆ ಸಂಘದ ಅಧ್ಯಕ್ಷ ವಿಷಕಂಠ, ಕಾರ್ಯದರ್ಶಿ ಶ್ರೀನಿವಾಸ, ಕೇಶಾಲಂಕಾರ ಸಂಘದ ಅಧ್ಯಕ್ಷ ಪುಟ್ಟರಾಜು, ಪುಟ್ಟಣ್ಣ, ಉಪಾಧ್ಯಕ್ಷ ಕೆಂಪರಾಜು, ಶಿವಪ್ರಸಾದ್, ರವಿ, ಸಿದ್ದಣ್ಣ, ಸುಧಾ, ಆರ್.ರವಿ, ಸವಿತಾ ಸಮಾಜದ ಮುಖಂಡರು ಇದ್ದರು.