ಲಾಭದತ್ತ ಸವಿತಾ ಸಹಕಾರ ಸಂಘ

23bdvt1
ಭದ್ರಾವತಿಯಲ್ಲಿ ಆಯೋಜಿಸಿದ್ದ ತಾಲೂಕು ಸವಿತಾ ಸಮಾಜ ವಿವಿಧೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಲತಾ ರಮೇಶ್ ಉದ್ಘಾಟಿಸಿದರು. ಜಿ.ವೆಂಕಟೇಶ್, ಎನ್.ಎಸ್.ರಮೇಶ್, ತಿಪ್ಪೇಸ್ವಾಮಿ, ಬಿ.ಎನ್.ಜಯರಾಂ ಇತರರಿದ್ದರು.
Published on

ಭದ್ರಾವತಿ: ಎಲ್ಲ ಸದಸ್ಯರ ಸಹಕಾರದಿಂದ ಸಂಘ ಉತ್ತಮವಾಗಿ ನಡೆದುಕೊಂಡು ಬರುತ್ತಿದ್ದು ಲಾಭದ ಹಾದಿಯಲ್ಲಿ ಸಾಗುತ್ತಿದೆ ಎಂದು ತಾಲೂಕು ಸವಿತಾ ಸಮಾಜ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಲತಾ ರಮೇಶ್‌ಕುಮಾರ್ ಹೇಳಿದರು.

ಇಲ್ಲಿನ ಹಳೇನಗರದ ಸಂಘದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ವಸದಸ್ಯರ ಸಭೆಗೆ ಚಾಲನೆ ನೀಡಿ ಮಾತನಾಡಿ, ಸಾಲ ಪಡೆದವರು ಸಕಾಲಕ್ಕೆ ಮರುಪಾವತಿ ಮಾಡಿದರೆ ಮತ್ತಷ್ಟು ಲಾಭ ಗಳಿಸಬಹುದು ಎಂದರು.
ಉಪಾಧ್ಯಕ್ಷ ಜಿ.ವೆಂಕಟೇಶ್, ಪ್ರಮುಖರಾದ ಎನ್.ಎಸ್.ರಮೇಶ್, ತಿಪ್ಪೇಸ್ವಾಮಿ, ಬಿ.ಎನ್.ಜಯರಾಂ, ಲೀಲಾವತಿ, ಎಂ.ರಾಜು, ರುದ್ರಪ್ಪ, ನರಸಿಂಹಮೂರ್ತಿ, ವಿಶ್ವನಾಥ್, ಪರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net