ಸೋಲೂರು ಹೋಬಳಿ ಮಾಗಡಿಯಲ್ಲೇ ಉಳಿಸಿ

Published on

ಮಾಗಡಿ: ಸೋಲೂರು ಹೋಬಳಿಯನ್ನು ಮಾಗಡಿ ತಾಲೂಕಿನಲ್ಲೇ ಉಳಿಸುವಂತೆ ಒತ್ತಾಯಿಸಿ ತಾಲೂಕು ವಕೀಲರ ಸಂದ ಅಧ್ಯಕ್ಷರು, ಪದಾಧಿಕಾರಿಗಳು ರಾಜ್ಯಪಾಲ ಥಾವರಚಂದ್​ ಗೆಹಲೋತ್​ ಅವರಿಗೆ ಮನವಿ ಸಲ್ಲಿಸಿದರು.

ಸಂಸದ ಡಾ.ಸಿ.ಎನ್​.ಮಂಜುನಾಥ್​ ನೇತೃತ್ವದಲ್ಲಿ ಮಂಗಳವಾರ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ವಕೀಲರ ಸಂದ ಪದಾಧಿಕಾರಿಗಳು ಸೋಲೂರನ್ನು ಯಾವುದೇ ಕಾರಣಕ್ಕೂ ನೆಲಮಂಗಲಕ್ಕೆ ಸೇರಿಸಬಾರದು ಎಂದು ಒತ್ತಾಯಿಸಿದರು. ತಾಲೂಕು ವಕೀಲರ ಸಂದ ಅಧ್ಯಕ್ಷ ಸುರೇಶ್​ ಮಾತನಾಡಿ, ಕೇವಲ ರಾಜಕೀಯ ಹಿತಾಸಕ್ತಿ ಹಾಗೂ ರಿಯಲ್​ ಎಸ್ಟೇಟ್​ ವ್ಯವಹಾರಗಳಿಗಾಗಿ ಸೋಲೂರನ್ನು ನೆಲಮಂಗಲಕ್ಕೆ ಸೇರಿಸಲು ಮುಂದಾಗಿರುವುದು ಸರಿಯಲ್ಲ. ಹಾಗಾಗಿ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆಗೊಳಿಸುವ ಬಗ್ಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ಅಂಗೀಕರಿಸಬಾರದು ಎಂದರು. ಇನ್ನು ಸೋಲೂರು ಹೋಬಳಿ ಮಾಗಡಿ ತಾಲೂಕಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಆಡಳಿತಾತ್ಮಕವಾಗಿ ಎಲ್ಲ ಕೆಲಸ ಕಾರ್ಯಗಳು ಮಾಗಡಿ ತಾಲೂಕಿನಿಂದಲೇ ನಿರ್ವಹಣೆಯಾಗುತ್ತಿವೆ. ಹಾಗಾಗಿ ಸೋಲೂರಿನ ಎಲ್ಲರೂ ಮಾಗಡಿ ತಾಲೂಕನ್ನೇ ಅವಲಂಬಿಸಿರುವುದರಿಂದ ಸೋಲೂರು ಹೋಬಳಿ ಮಾಗಡಿ ತಾಲೂಕಿನಲ್ಲೇ ಉಳಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net