ಜೀವ ಸಂಕುಲ ಸಂರಕ್ಷಣೆಗೆ ಪರಿಸರ ಉಳಿಸಿ

Save the environment to protect wildlife
ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ವಿಶ್ವ ಭೂ ದಿನ ಆಚರಿಸಲಾಯಿತು. ಸಂತೋಷ ಬಂಡೆ, ಮಂಜುನಾಥ ಗಂಗನಳ್ಳಿ, ಬಸವರಾಜ ಸಾರವಾಡ ಮತ್ತಿತರರಿದ್ದಾರೆ.
Published on

ವಿಜಯಪುರ: ಭೂ ದಿನವು ಎಲ್ಲರಲ್ಲಿ ಪರಿಸರ ಜಾಗೃತಿಯ ಸಂಸತಿ ಬೆಳೆಸುತ್ತದೆ. ಭೂಮಿಯು ಮನುಕುಲ ಮತ್ತು ಜೀವ ಸಂಕುಲಕ್ಕೆ ಸೇರಿದ್ದು, ಅದನ್ನು ಪರಿಸರಾತ್ಮಕ ಸಮಸ್ಯೆಗಳಿಂದ ಸಂರಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಾಹಿತಿ ಸಂತೋಷ ಬಂಡೆ ಹೇಳಿದರು.

ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಭೂ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ವೇದಗಳ ಕಾಲದಿಂದ ಭೂಮಿಗೆ ಪೂಜ್ಯನಿಯ ಸ್ಥಾನವಿದೆ. ಭೂಮಿಯ ಬಳಕೆಯಿಂದ ಅಭಿವೃದ್ಧಿ ಆಗಬೇಕೇ ವಿನಾ@ ಅವನತಿ ಅಲ್ಲ. ನಮ್ಮ ನಿತ್ಯ ಜೀವನದಲ್ಲಿ ಪರಿಸರಕ್ಕೆ ಪೂರಕವಾದ ಕೆಲಸ ಮಾಡಿ ಭೂಮಿಯನ್ನು ಸಮತೋಲನದಲ್ಲಿಟ್ಟು ರಸೋಣ ಎಂದು ಕರೆ ನೀಡಿದರು.

ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ಮಿತಿಮೀರಿದ ಜನಸಂಖ್ಯೆ, ಜೀವ ವೈವಿಧ್ಯತೆಯ ನಷ್ಟ, ಹೆಚ್ಚುತ್ತಿರುವ ಮಾಲಿನ್ಯದಂತಹ ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಭವಿಷ್ಯದ ಪೀಳಿಗೆಗೆ ಸುಂದರ ಭೂಮಿ ಉಳಿಸುವ ಹೊಣೆ ನಮ್ಮ ಮೇಲಿದೆ ಎಂದು ತಿಳಿಸಿದರು.

ಬಸವರಾಜ ಸಾರವಾಡ, ಆನಂದ ಗಂಗನಳ್ಳಿ, ಸಿದ್ಧಾರೂಢ ಬಂಡೆ, ಜಟ್ಟಿಂಗರಾಯ ಕಕ್ಕೇರಗೊಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net