ವಚನ ಭ್ರಷ್ಟರಿಂದ ದೇಶ ರಕ್ಷಿಸಿ

Published on

ಸೋಮವಾರಪೇಟೆ: ಕೊಡಗು ಜಿಲ್ಲೆಯ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ವಚನ ಭ್ರಷ್ಟರಿಂದ ದೇಶವನ್ನು ರಕ್ಷಿಸಬೇಕೆಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ಕೇಂದ್ರ ಸರ್ಕಾರದ ಜನವಿರೋ ನೀತಿಯಿಂದಾಗಿ ಜನರು ಆಕ್ರೋಶಗೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿಭಾಗ್ಯ ಎಂದು ಅವಹೇಳನ ಮಾಡುವ ಬಿಜೆಪಿಗರಿಗೆ, ಮಹಿಳೆಯರು, ಬಡವರು, ರೈತರು, ಪರಿಶಿಷ್ಟರು, ಹಿಂದುಳಿದ ಸಮುದಾಯಗಳು, ಶೋಷಿತರು, ಅಲ್ಪಸಂಖ್ಯಾತರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುವ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮೋದಿಯವರ ಸುಳ್ಳು ಪ್ರಜ್ಞಾವಂತರಿಗೆ ಗೊತ್ತಾಗಿದೆ. ಎನ್‌ಡಿಎ ಸೋಲುವುದು ಗೊತ್ತಾಗಿರುವುದರಿಂದ ಧರ್ಮ ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸುವ ಕೃತ್ಯಕ್ಕೆ ಕೈ ಹಾಕಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾನೂನಿಂದ ಕಾರ್ಪೊರೇಟ್ ಕಂಪನಿಗಳು ಕೊಡಗು ಸೇರಿದಂತೆ ಹಳ್ಳಿಯ ಭೂಮಿಯನ್ನು ಸುಲಭವಾಗಿ ಖರೀದಿಸಬಹುದು. ಇದು ರೈತರ ಬದುಕಿನ ಮೇಲೆ ಸವಾರಿ ಮಾಡಿದಂತಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net