ಮಣ್ಣು ಉಳಿಸಿ ಅಭಿಯಾನಕ್ಕೆ ಕೈಜೋಡಿಸಿ

Save Soil Abhiyan, Mallikarjuna Jogur, Ind, BJP,
ಇಂಡಿ ಪಟ್ಟಣದಲ್ಲಿ ಬಿಜೆಪಿ ಮಂಡಲ ಆಶ್ರಯದಲ್ಲಿ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರ ಚಾಲನೆ ನೀಡಿದರು. ಕಾಸುಗೌಡ ಬಿರಾದಾರ, ರಾಜು ಪೂಜಾರಿ, ಮಲ್ಲಿಕಾರ್ಜುನ ಕಿವಡೆ, ಸಿದ್ಧಲಿಂಗ ಹಂಜಗಿ, ಬುದ್ದುಗೌಡ ಪಾಟೀಲ ಇತರರಿದ್ದರು.
Published on

ಇಂಡಿ: ಜಗತ್ತಿನ ಜೀವರಾಸಿಗಳಿಗೆ ಮಣ್ಣು ಅಗತ್ಯವಾಗಿದೆ. ಆದ್ದರಿಂದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಣ್ಣು ಉಳಿಸಿ ಅಭಿಯಾನ ಕೈಗೊಂಡಿದ್ದಾರೆ. ಅವರ ಜತೆಗೂಡಿ ನಾವು ಕೂಡ ಮಣ್ಣು ಉಳಿಸಿ ಅಭಿಯಾನ ಪ್ರಾರಂಭಿಸಿದ್ದೇವೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರ ಹೇಳಿದರು.

ಪಟ್ಟಣದ ಸಿಂದಗಿ ರಸ್ತೆಯ ದಾನಮ್ಮ ದೇವಿ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಅಭಿಯಾನದ ಮೂಲಕ ಸಾರ್ವಜನಿಕರಿಗೆ ಮಣ್ಣಿನ ಮಹತ್ವ ತಿಳಿಸುವುದರೊಂದಿಗೆ ನಮ್ಮ ದೇಶದ ಪವಿತ್ರ ಮಠ-ಮಂದಿರಗಳಲ್ಲಿ, ವೀರಯೋಧರ ಸಮಾದಿಯ ಹತ್ತಿರದ ಮಣ್ಣನ್ನು ಸಂಗ್ರಹಿಸಲಾಗುತ್ತಿದೆ. ಅದನ್ನು ಸಾರ್ವಜನಿಕರ ಮನೆ ಮನೆಗಳಿಗೆ ಕೊಂಡೊಯ್ದು ಅಲ್ಲಿ ಮಹಿಳೆಯರಿಂದ ಮಣ್ಣನ್ನು ಸಂಗ್ರಹಿಸಿ ಒಂದು ಕಳಸಿಯಲ್ಲಿ (ಬಿಂದಿಗೆಯಲ್ಲಿ) ತುಂಬಿಕೊಂಡು ಹೋಗಿ ದೆಹಲಿಯ ದೇಶಭಕ್ತರ, ವೀರಯೋಧರ ಅಮೃತ ವಾಟಿಕಾ ವನದಲ್ಲಿ ಸಮರ್ಪಣೆ ಮಾಡಲಾಗುವುದು ಎಂದರು.

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ರಾಜು ಪೂಜಾರಿ, ಮಲ್ಲಿಕಾರ್ಜುನ ಕಿವಡೆ, ಸಿದ್ಧಲಿಂಗ ಹಂಜಗಿ, ಬುದ್ದುಗೌಡ ಪಾಟೀಲ, ಅನೀಲ ಜಮಾದಾರ, ಮುತ್ತು ದೇಸಾಯಿ, ರಾಜಕುಮಾರ ಸಗಾಯಿ, ರವಿ ವಗ್ಗೆ, ಯಲ್ಲಪ್ಪ ಹದರಿ, ಮಲ್ಲಿಕಾರ್ಜುನ ವಾಲಿಕಾರ, ಶಾಂತು ಕಂಬಾರ, ರಾಜಶೇಖರ ಯರಗಲ್ಲ, ಕಾಶಿನಾಥ ನಾಯಿಕೋಡಿ, ಆರ್.ಡಿ.ಪಾಟೀಲ, ಶ್ರೀಮಂತ ಮೊಗಲಾಯಿ, ವಿಜಯಲಕ್ಷ್ಮೀ ರೂಗಿಮಠ, ಅನೀಲಗೌಡ ಬಿರಾದಾರ, ಮಂಜು ದೇವರ, ವಜ್ರಕಾಂತ ಕುಡಿಗನೂರ, ಕಲ್ಲಪ್ಪ ಉಟಗಿ, ಮಹದೇವ ಗುಡ್ಡೋಡಗಿ, ಸಂತೋಷ ಪಾಟೀಲ, ಸಂಜು ದಶವಂತ, ರಾಮಸಿಂಗ್ ಕನ್ನೊಳ್ಳಿ, ಮಂಜು ದೇವರ, ಅಶೋಕ ಅಕಲಾದಿ, ದತ್ತಾ ಬಂಡೇನವರ, ಗೋವಿಂದ ರಾಠೋಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net