ನಮ್ಮತನ ಉಳಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸಿ

13KWR1
Published on

ಶಿರಸಿ: ತಂತ್ರಜ್ಞಾನ ಬೆಳೆದ ಹಾಗೆ ಮಾನವೀಯ ಸಂಬಂಧಗಳಿಂದ ದೂರ ಆಗುತ್ತಿದ್ದೇವೆ. ಮೊಬೈಲ್ ದಾಸರಾಗಿದ್ದೇವೆ ಇದರಿಂದ ಕುಟುಂಬ ವ್ಯವಸ್ಥೆಯೇ ಕುಸಿದು ಹೋಗುತ್ತಿದೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಸಿದರು.

ಶ್ರೀಕುಮಾರ ಲಾಜಿಸ್ಟಿಕ್ಸ್ ಪ್ರೈ.ಲಿ, ಹೋಟೆಲ್ ಅಪೊಲೋ ಇಂಟರ್ ನ್ಯಾಷನಲ್ ಹಾಗೂ ಜೀವಜಲ ಕಾರ್ಯಪಡೆಯ ಪ್ರಾಯೋಜಕತ್ವದಲ್ಲಿ ನಾವು, ನಮ್ಮಿಷ್ಟ ೇಸ್‌ಬುಕ್ ಬಳಗದಿಂದ ಶಿರಸಿಯ ತೋಟಿಗರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಹ್ಯಾದ್ರಿ ಸಂಭ್ರಮ ಎಂಬ ಹವ್ಯಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಹವ್ಯಕರು ತಮ್ಮ ಪ್ರತಿಭೆಯ ಕಾರಣದಿಂದ ದೇಶದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಹೆಸರು ಮಾಡಿದ್ದಾರೆ. ಆದರೆ, ಇಂದು ಮೊಬೈಲ್ ಮಾಯೆ ಆವರಿಸುತ್ತಿರುವ ಸಂದರ್ಭದಲ್ಲಿ ನಮ್ಮತನ ಉಳಿಸಿಕೊಂಡು ಮುಂದಿನ ಪೀಳಿಕೆಗೆ ಹಸ್ತಾಂತರಿಸುವ ಬಹು ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಶ್ರೀ ಕುಮಾರ ಲಾಜಿಸ್ಟಿಕ್ಸ್ ಮಾಲೀಕ ವೆಂಕಟರಮಣ ಹೆಗಡೆ ಕವಲಕ್ಕಿ ಅಧ್ಯಕ್ಷತೆ ವಹಿಸಿದ್ದರು. ಅಪೊಲೋ ಇಂಟರ್ ನ್ಯಾಷನಲ್ ಮಾಲೀಕ ಶ್ರೀಕಾಂತ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಪ್ರಮುಖರಾದ ಎಂ.ವಿ. ಜೋಶಿ ಕಾನಮೂಲೆ, ಎಂ.ಪಿ. ಹೆಗಡೆ ವೇದಿಕೆಯ ಮೇಲಿದ್ದರು. ಸೂರ್ಯನಾರಾಯಣ ಹೆಗಡೆ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಾವಿತ್ರಿ ರಮೇಶ ಹೆಗಡೆ ವಂದಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿ.ಪಿ. ಹೆಗಡೆ ವೈಶಾಲಿ, ಶ್ರೀಪಾದ ರಾಯ್ಸದ್, ವೇದಾ ಹೆಗಡೆ, ಮಮತಾ ಸತೀಶ, ದತ್ತಗುರು ಹೆಗಡೆ ಬೆಂಗಳೂರು, ಲತಾ ಭಟ್, ಸೀತಾರಾಮ ಹೆಗಡೆ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net