ನಮ್ಮತನ ಉಳಿಸಿ ಭಾರತೀಯ ಸಂಸ್ಕೃತಿ ಬಲಪಡಿಸಿ

bir 1 (2)
Published on

ಬೀರೂರು: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಹೇಳಿದರು.

ರೋಟರಿ ಭವನದಲ್ಲಿ ಇನ್ನರ್‌ವೀಲ್ ಸಂಸ್ಥೆಯ 2025-26ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ನಾಣ್ಣುಡಿಯಂತೆ ಮೊದಲು ಮಹಿಳೆಯವರು ಅನ್ಯ ಸಂಸ್ಕೃತಿಗೆ ಮಾರು ಹೋಗದೆ ನಮ್ಮತನ ಉಳಿಸಿ ಬೆಳೆಸುವ ಮೂಲಕ ಭಾರತದ ಸಂಸ್ಕೃತಿ ಬಲಪಡಿಸಬೇಕು ಎಂದರು.

ಇನ್ನರ್‌ವೀಲ್ ಸಂಸ್ಥೆ ಮಹಿಳೆಯರಲ್ಲಿ ಅಡಗಿರುವ ಪ್ರತಿಭೆಯನ್ನು ಬೆಳಕಿಗೆ ತರುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಮಹಿಳೆಯರ ಸ್ವಾವಲಂಬನೆಗೆ ಪೂರಕ ಯೋಜನೆಗಳನ್ನು ಸಂಸ್ಥೆಯಿಂದ ಜಾರಿಗೊಳಿಸಲಿ ಮತ್ತು ಅವುಗಳಿಂದ ಸಮುದಾಯಗಳಿಗೆ ಸೇವೆ ದೊರೆಯಲಿ ಎಂದು ಆಶಿಸಿದರು.

ನೂತನ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಸಂಸ್ಥೆಯ ಎಲ್ಲ ಪೂರ್ವಾಧ್ಯಕ್ಷರ ಶ್ರಮ, ತ್ಯಾಗದ ಲವಾಗಿ ಈ ಸಂಸ್ಥೆ ಇಂದಿಗೂ ಭದ್ರವಾಗಿದೆ. ನಾವು ನಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜದ ಒಳಿತಿಗೆ ಮೀಸಲಿರಿಸಬೇಕು. ಶಾಲಾ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಜತೆಗೆ ಎಲ್ಲ ರೀತಿಯ ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.

ನಿರ್ಗಮಿತ ಅಧ್ಯಕ್ಷೆ ನಳಿನಾ ನಾಗರಾಜ್, ಕಾರ್ಯದರ್ಶಿ ಲತಾ ನಾಗರಾಜ್, ಭಾಗ್ಯ ನಾರಾಯಣ್, ಖಜಾಂಚಿ ಶಿಲ್ಪಾ ವಿಕ್ರಂ, ನಳಿನಿ ವಿಶ್ವನಾಥ್, ಮಧು ಶಿವಸ್ವಾಮಿ, ಪುಷ್ಪ ನಂಜುಂಡಪ್ಪ, ಅರುಣ ರವಿಕುಮಾರ್, ಸುಮನ, ಪ್ರೇಮ ಸೋಮಶೇಖರ್, ಅನುಸೂಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net