ಕಲುಷಿತಗೊಳ್ಳದಂತೆ ಕಾವೇರಿ ಉಳಿಸಿ

26Kush02
ಕುಶಾಲನಗರ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಡೆದ 156ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ವನಿತಾ, ಪರಮೇಶ್, ಸೋಮಶೇಖರ್, ಬೋಸ್ ಮೊಣ್ಣಪ್ಪ, ಪ್ರವೀಣ್, ಗಿರೀಶ್, ಜಗದೀಶ್, ಗಣೇಶ್ ಮತ್ತಿತರರು ಪಾಲ್ಗೊಂಡಿದ್ದರು.
Published on

ಕುಶಾಲನಗರ : ಜೀವನದಿ ಕಾವೇರಿಯನ್ನು ಕಲುಷಿತಗೊಳ್ಳದಂತೆ ಉಳಿಸಿ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಪ್ರಮುಖ ಜವಾಬ್ದಾರಿ ಎಂದು ಕುಶಾಲನಗರ ಬೈಚನಹಳ್ಳಿ ಶ್ರೀ ಆದಿಶಕ್ತಿ ಅಂತರ್ಗಟ್ಟೆ ಅಮ್ಮ ದೇವಾಲಯದ ಆಡಳಿತ ಮಂಡಳಿ ಪ್ರಮುಖ ಬಿ.ಎಸ್. ಪರಮೇಶ್ ಕರೆ ನೀಡಿದರು.

ಕುಶಾಲನಗರ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಬೈಚನಹಳ್ಳಿ ಶ್ರೀ ಆದಿಶಕ್ತಿ ಅಂತರ್ಗಟ್ಟೆ ಅಮ್ಮ ದೇವಾಲಯ ಸೇವಾ ಸಮಿತಿ ಸಹಯೋಗದೊಂದಿಗೆ ಹುಣ್ಣಿಮೆ ಅಂಗವಾಗಿ ಆಯೋಜಿಸಿದ್ದ 156ನೇ ಮಹಾಆರತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನದಿಗೆ ನೇರವಾಗಿ ಕಲುಷಿತ ನೀರು, ತ್ಯಾಜ್ಯ ಸೇರದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕಾಗಿದೆ. ಈ ಸಂಬಂಧ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಅರ್ಚಕ ಕೃಷ್ಣಮೂರ್ತಿ ಭಟ್, ಆದಿಶಕ್ತಿ ಅಂತರ್ಗಟ್ಟೆ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ವಿ.ಗಿರೀಶ್, ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ಬಿ.ಎಂ. ಜಗದೀಶ್, ಬಿ.ಡಿ.ಜಗದೀಶ್, ಬಿ.ಎಸ್.ರವಿಕುಮಾರ್ ಮತ್ತಿತರರು ಫಲತಾಂಬೂಲದೊಂದಿಗೆ ನದಿಗೆ ಆರತಿ ಬೆಳಗಿದರು. ಆರತಿ ಬಳಗದ ಪ್ರಮುಖರಾದ ವನಿತಾ ಚಂದ್ರಮೋಹನ್, ಮಂಡೆಪಂಡ ಬೋಸ್ ಮೊಣ್ಣಪ್ಪ, ಡಿ.ಆರ್.ಸೋಮಶೇಖರ್, ಪ್ರವೀಣ್, ಬಳಗದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net