ಹಾವೇರಿ ವಿವಿ ಉಳಿಸಿ ಹೋರಾಟಕ್ಕೆ ಅಗಡಿ ಅಕ್ಕಿಮಠದ ಬೆಂಬಲ

Agadi Akki matha Sri Gurulinga Swamiji
Published on

ಹಾವೇರಿ: ರಾಜ್ಯ ಸರ್ಕಾರ ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚುವ ಚಿಂತನೆ ನಡೆಸಿರುವುದನ್ನು ಖಂಡಿಸುತ್ತೇವೆ. ವಿವಿ ಉಳಿಸಿ ಹೋರಾಟಕ್ಕೆ ಅಗಡಿಯ ಅಕ್ಕಿ ಮಠದ ಬೆಂಬಲ ಇದೆ ಎಂದು ಶ್ರೀ ಗುರುಲಿಂಗ ಸ್ವಾಮೀಜಿ ಹೇಳಿದರು.

ಶಿಕ್ಷಣದಿಂದ ಅತಿ ಹೆಚ್ಚು ವಂಚಿತವಾಗಿರುವ ಹಾವೇರಿ ಜಿಲ್ಲೆಯ ಜನತೆಗೆ ಹಾವೇರಿ ವಿವಿ ಮುಚ್ಚುವುದು ಕೊಡಲಿ ಏಟು ಕೊಟ್ಟಂತಾಗುತ್ತದೆ. ಗುಣಮಟ್ಟದ ಶಿಕ್ಷಣದಿಂದ ವಂಚಿತರಾದ ಜಿಲ್ಲೆಯ ಮಕ್ಕಳು ದಾವಣಗೆರೆ, ಹುಬ್ಬಳ್ಳಿ- ಧಾರವಾಡದತ್ತ ಮುಖ ಮಾಡುವಂತಾಗಿದೆ. ಉನ್ನತ ಶಿಕ್ಷಣಕ್ಕಾಗಿ ಆರಂಭವಾದ ಹಾವೇರಿ ವಿವಿ ಮುಚ್ಚಿದರೆ ಜಿಲ್ಲೆ ಮತ್ತೆ ಹಿಂದುಳಿಯುತ್ತದೆ. ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳು ಯಾವ ಕಾಕ್ಲೀ ಸರ್ಕಾರಕ್ಕೆ ಹೊರೆ ಆಗುವುದಿಲ್ಲ. ಅಧಿಕಾರದ ಆಸೆಗಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ರಾಜ್ಯ ಸರ್ಕಾರ ಗ್ಯಾರಂಟಿಗಳ ಜತೆಗೆ ಶಿಕ್ಷಣ, ಕೃಷಿ, ಮತ್ತಿತರ ಅಗತ್ಯ ಸೇವೆಗಳನ್ನು ನೀಡಲೇಬೇಕು ಎಂದು ಅಕ್ಕಿಮಠದ ಶ್ರೀಗಳು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net