ಜನಪದ ಸಂಸ್ಕೃತಿ ಉಳಿಸಿ-ಬೆಳೆಸಿ; ಗೌರಮ್ಮ ಸಂಕೀನಮಠ ಹೇಳಿಕೆ

GFGC NAVABHAGA
ವಿಜಯಪುರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಜಾನಪದ ಜಾತ್ರೆ ಮತ್ತು ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಉಪನ್ಯಾಸಕಿಯರು ಮತ್ತು ವಿದ್ಯಾರ್ಥಿನಿಯರು ಇಲಕಲ್ ಸೀರೆಯನ್ನುಟ್ಟು ಸಂಭ್ರಮಿಸಿದರು. ಡಾ. ರೋಹಿಣಿ ಹಿರೇಶೆಡ್ಡಿ, ಡಾ. ರಾಜಶ್ರೀ ಮಾರನೂರ, ಡಾ. ವಿಶಾಲಾಕ್ಷೀ ಹೊನ್ನಾಕಟ್ಟಿ ಮತ್ತಿತರರಿದ್ದಾರೆ.
Published on

ವಿಜಯಪುರ: ಗ್ರಾಮೀಣ ಸೊಗಡು ಹಾಗೂ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ಜಾನಪದ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಗೌರಮ್ಮ ಸಂಕಿನಮಠ ಹೇಳಿದರು.

ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವಿಭಾಗಡಿ ಮಂಗಳವಾರ ಜರುಗಿದ ಜಾನಪದ ಜಾತ್ರೆ ಮತ್ತು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಭಾರತೀಯರ ಜೀವನ ಶೈಲಿ ಮತ್ತು ಆಚಾರ-ವಿಚಾರ, ವೇಷ-ಭೂಷಣ, ಸಂಪ್ರದಾಯ, ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಉಳಿಸಿ-ಬೆಳೆಸಲು ಜಾನಪದ ಹಬ್ಬ ಮತ್ತು ಜಾನಪದ ಜಾತ್ರೆಯಂಥ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಶಿಕ್ಷಣ ಜೀವನೋಪಾಯಕ್ಕೊಂದು ಸಾಧನವಾದರೆ, ಸಂಪ್ರದಾಯ-ಸಂಸ್ಕೃತಿಯು ಮನುಷ್ಯನ ಬದುಕಿಗೆ ದಾರಿದೀಪವಾಗಿದೆ. ಅದಕ್ಕಾಗಿ ಯಾಕೋ ಏನೋ ಇಂದು ನಮ್ಮ ಯುವ ಸಮುದಾಯ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮತನವನ್ನು ಮರೆಯುತ್ತಿರುವುದು ಕಳವಳಕಾರಿ ಸಂಗತಿ ಎಂದರು.

ಸಾಂಸ್ಕೃತಿ ವಿಭಾಗದ ಸಂಚಾಲಕ ಡಾ. ಐ.ಎಸ್.ಶಿವಶರಣರ, ಐಕ್ಯೂಎಸಿ ಸಂಚಾಲಕ ಡಾ. ಸಂತೋಷ ಕಬಾಡೆ, ಡಾ. ಪಿ.ಎಂ.ಪರುಗೊಂಡ ಮತ್ತಿತರರಿದ್ದರು.

ಪ್ರೊ.ಎ.ಐ. ಹಂಜಗಿ, ಪ್ರೊ.ಎಂ.ಎಸ್.ಖೊದ್ನಾಪೂರ, ಡಾ.ಚಂದ್ರಕಾಂತ ಬಿ, ಡಾ. ವಿವೇಕಾನಂದ ಉಘಡೆ, ಡಾ. ಪ್ರಕಾಶ ಹಾವೇರಿಪೇಟ, ಡಾ.ಎಸ್.ಪಿ. ಚವಾಣ್,ಡಾ.ಎ.ಎಸ್. ಕುಲಕರ್ಣಿ, ಡಾ. ರೋಹಿಣಿ ಹಿರೇಶೆಡ್ಡಿ, ಡಾ. ರಾಜಶ್ರೀ ಮಾರನೂರ, ಡಾ. ವಿಶಾಲಾಕ್ಷೀ ಹೊನ್ನಾಕಟ್ಟಿ, ಪ್ರೊ. ಬಿ.ಎನ್. ಶಾಡದಳ್ಳಿ, ಪ್ರೊ.ಎ.ಎ. ಮುಲ್ಲಾ, ಎಸ್.ಎಂ. ಮುಜಾವರ, ಪ್ರಭು ಬಜಂತ್ರಿ, ರೇವಣಸಿದ್ದ ಶಿರನಾಳ ಮತ್ತಿತರರಿದ್ದರು.

ಅಭೂತಪೂರ್ವವಾಗಿ ಆಚರಿಸಲಾದ ಈ ಜಾನಪದ ಜಾತ್ರೆ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರು ಧೋತಿ-ಪಂಚೆ ಮತ್ತು ರುಮಾಲು ಧರಿಸಿ, ಉಪನ್ಯಾಸಕಿಯರು ಮತ್ತು ವಿದ್ಯಾರ್ಥಿನಿಯರು ಇಲಕಲ್ ಸೀರೆಯನ್ನುಟ್ಟು ನಮ್ಮ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net