

ಸಿಂದಗಿ: ಭಾಷಾ ಸಾಹಿತ್ಯಕ್ಕೆ ತಾಯಿ ಬೇರು ಮಾತ ಭಾಷೆ. ನಮ್ಮ ಮಾತ ಭಾಷೆಯನ್ನು ನಿತ್ಯನುಡಿಗಳಿಂದ ಉಳಿಸಿ ಬೆಳೆಸಬೇಕಿದೆ ಎಂದು ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯರಾದ ಡಾ. ಚನ್ನಪ್ಪ ಕಟ್ಟಿ ಹೇಳಿದರು.
ಶನಿವಾರ ಪಟ್ಟಣದ ಪಿಇಎಸ್ ಸಂಸ್ಥೆ ಹಾಗೂ ಲಯನ್ಸ್ ಕ್ಲಬ್ ಸಿಂದಗಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಧಕರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಕುವೆಂಪು ಭಾಷಾ ಪ್ರಾಧಿಕಾರಕ್ಕೆ ಉತ್ತರ ಕರ್ನಾಟಕದ ತಮ್ಮನ್ನು ಆಯ್ಕೆ ಮಾಡಿರುವುದು ಈ ಭಗದ ಸಾಹಿತ್ಯ ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸಲು ಹಾಗೂ ಅವರ ಅಮೂಲ್ಯ ಕತಿಗಳನ್ನು ಇತರ ಭಾಷೆಗಳಿಗೆ ಭಾಷಾಂತರಗೊಳಿಸಲು ಸಹಕಾರ ನೀಡಿದಂತಾಗಿದೆ ಎಂದರು.ಕರ್ನಾಟಕ ಜನಪದ ಅಕಾಡೆಮಿ ನೂತನ ಸದಸ್ಯ ಡಾ. ಎಂ.ಎಂ. ಪಡಶೆಟ್ಟಿಯವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಜನಪದ ಎಂದರೆ
ಅದು ಜೀವ ಭಾಷೆ. ನಮ್ಮ ಬದುಕಿನ ಭಾಷೆ. ಆದ್ದರಿಂದ ನಾವೆಲ್ಲರೂ ಜನಪದರೇ. ಜನಪದವೇ ನಮ್ಮ ಬದುಕಿನ ಜೀವಾಳ ಹಾಗಾಗಿ ಜನಪದ ಸಾಹಿತ್ಯ ಮತ್ತು ಸಂಸತಿಯನ್ನು ಬೆಳೆಸಲು ಸರಕಾರವು ಈ ಹುದ್ದೆ ಕೊಟ್ಟು ಒಂದು ಹೊಸ ಜವಾಬ್ದಾರಿಯನ್ನು ಹೆಗಲಿಗೇರಿದಂತಾಗಿದೆ. ಇದನ್ನು ಪ್ರಾಮಾಣಿಕವಾಗಿ ನಿಭಾಯಿಸಲು ಪ್ರಯತ್ನಿಸುವೆ ಎಂದು ಹೇಳಿದರು.
ಜಿ.ಪಿ. ಪೋರವಾಲ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ರವಿ ಗೋಲಾ, 70ರ ವಯಸ್ಸಲ್ಲೂ ಎಂ.ಎಂ. ಇಂಗ್ಲಿಷ್ ಪದವಿ ಪಡೆದಿದ್ದಕ್ಕಾಗಿ ಸನ್ಮಾನಿಸಲಾಯಿತು. ವಿಭಾಗೀಯ ಜೋನ್ ಚೇರ್ಮನ್ ಎಂ.ಜೆ.ಎ್ ಲಾಯಿನ್ ಕೆ.ಎಚ್. ಸೋಮಾಪೂರ ಅವರು ಸ್ಥಳಿಯ ಲಯನ್ಸ್ ಕ್ಲಬ್ನ ಹುಟ್ಟು ಹಾಗೂ ಶ್ರೇಯಸ್ಸಿನ ಕುರಿತು ಮಾತನಾಡಿದರು.
ಸಿದ್ಧಲಿಂಗಪ್ಪ ವಡ್ಡೋಡಗಿ, ಬಿ.ಪಿ. ಕರ್ಜಗಿ, ಮಹಾದೇವ ಲೋಣಿ, ಆಯ್.ಬಿ. ಬಿರಾದಾರ ಉಪನ್ಯಾಸಕ ಅಮೀರ ಮೋಪಗಾರ ಆರ್.ಬಿ. ಗೋಡಕರ, ಎಸ್.ಎಸ್. ಪಾಟೀಲ, ಎಸ್.ಬಿ. ಚಾಗಶೆಟ್ಟಿ, ಪ್ರೊ. ಎಸ್.ವೈ. ಬೀಳಗಿ, ಜಿ.ಎಸ್. ಕಡಣಿ ಉಪಸ್ಥಿತರಿದ್ದರು.