ತುಳು ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸಿ : ಬಿ.ಬಿ.ಐತಪ್ಪ ರೈ ಕರೆ

MDK01
Published on

ಮಡಿಕೇರಿ: ತುಳು ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವಂತೆ ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತಪ್ಪ ರೈ ಕರೆ ನೀಡಿದರು.


ಮೇಕೇರಿ ವಿಷ್ಪರಿಂಗ್ ವುಡ್ ರೆಸಾರ್ಟ್ ಮತ್ತು ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಸಹಯೋಗದಲ್ಲಿ ಮೇಕೇರಿಯಲ್ಲಿ ಆಯೋಜಿಸಿದ್ದ ಆಟಿದ-ಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ತುಳು ಜನಾಂಗದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸಬೇಕು. ಜತೆಗೆ ಎಲ್ಲರೂ ಸಂಘಟಿತರಾಗಿ ತುಳು ಸಂಸ್ಕೃತಿಗೆ ಪೂರಕವಾದ ಹಬ್ಬಗಳನ್ನು ಆಚರಿಸುವಂತೆ ತಿಳಿಸಿದರು.


ಕೂಟದ ಉಪಾಧ್ಯಕ್ಷ ಆನಂದ ರಘು, ಸ್ಥಾಪಕ ಸಲಹೆಗಾರ ಹರೀಶ್ ಆಳ್ವ ಹಾಗೂ ರೆಸಾರ್ಟ್ ಮಾಲೀಕರ, ಸಂಯೋಜಕರೂ ಆದ ರತ್ನಾಕರ್ ರೈ, ಚಿತ್ರನಟ ಹಾಗೂ ಪ್ರಗತಿಪರ ಕೃಷಿಕ ಶರಣ್ ಶೆಟ್ಟಿ ಮಾತನಾಡಿ, ತುಳು ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಒಗ್ಗಟ್ಟಿನ ಪರಿಶ್ರಮ ಅಗತ್ಯವೆಂದರು.


ಕಾರ್ಯಕ್ರಮದಲ್ಲಿ ತುಳುವೆರ ಜನಪದ ಕೂಟದ ಮಾಜಿ ಅಧ್ಯಕ್ಷರು ಹಾಗೂ ಗೋಣಿಕೊಪ್ಪ ಜನಪದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶೇಖರ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ, ಸಂಘಟನಾ ಕಾರ್ಯದರ್ಶಿ ಬಿ.ಪಿ.ರಾಜೀವ್ ಲೋಚನ, ಖಜಾಂಚಿ ಪ್ರಭು ರೈ, ಕಾರ್ಯದರ್ಶಿ ಬಿ.ಎಸ್.ಆನಂದ ರಘು, ಜಿಲ್ಲಾ ನಿರ್ದೇಶಕರುಗಳು, ತಾಲ್ಲೂಕು ಅಧ್ಯಕ್ಷರುಗಳು, ತುಳುವೆರ ೧೩ ಸಮುದಾಯದ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.


ಆಟಿ ಕೂಟದ ವಿಶೇಷ ಖಾದ್ಯಗಳನ್ನು ಜನಾಂಗ ಬಾಂಧವರು ಸೇವಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಕರ್ಷಕ ಚಂಡೆವಾದನ, ಕೋಟಿ ಚೆನ್ನಯ್ಯ ಯಕ್ಷಗಾನ ಪ್ರಸಂಗ ಹಾಗೂ ವಿಕ್ರಮ್ ಜಾದೂಗಾರರಿಂದ ನಡೆದ ಜಾದೂ ಪದರ್ಶನ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net