ಬಂಜಾರ ಸಂಸತಿ ಉಳಿಸಿ ಬೆಳೆಸಿ

Save and grow the Banjara Parliament
ಮಖಣಾಪುರ ಎಲ್​ಟಿ 1 ರಲ್ಲಿ ಕರಕುಶಲ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಿ ಧಾರವಾಡದ ಕರಕುಶಲ ಸೇವಾ ಕೇಂದ್ರದ ಅಧಿಕಾರಿ ದರ್ಶನಾ ಮಾತನಾಡಿದರು. ರವಿ ಲಮಾಣಿ, ಬಾಬು ಪವಾರ, ಶಾರದಾ ಲಮಾಣಿ ಮತ್ತಿತರರಿದ್ದಾರೆ.
Published on

ವಿಜಯಪುರ: ಬಂಜಾರಾ ಸಮುದಾಯದ ಸಂಸತಿ ಅತ್ಯಂತ ಶ್ರೀಮಂತ ಸಂಸ್ಕೃತಿ. ಸದ್ಯ ಈ ಸಮಾಜದ ಉಡುಪುಗಳಿಗೆ ಜಗತ್ತಿನಾದ್ಯಂತ ಉತ್ತಮ ಬೇಡಿಕೆಯಿದ್ದು, ಬಂಜಾರಾ ಸಮುದಾಯದ ಮಹಿಳೆಯರು ಕರಕುಶಲ ಕೌಶಲದಲ್ಲಿ ಪರಿಣತಿ ಸಾಧಿಸುವಂತೆ ಧಾರವಾಡದ ಕರಕುಶಲ ಸೇವಾ ಕೇಂದ್ರದ ಅಧಿಕಾರಿ ದರ್ಶನಾ ಹೇಳಿದರು.

ತಾಲೂಕಿನ ಮಖಣಾಪುರ ಎಲ್​ಟಿ&1ರಲ್ಲಿ ಕೇಂದ್ರ ಸರ್ಕಾರದ ಜವಳಿ ಸಚಿವಾಲಯ, ಕರಕುಶಲ ಸೇವಾ ಕೇಂದ್ರ ಧಾರವಾಡ, ಆಲ್​ ಇಂಡಿಯಾ ಬಂಜಾರಾ ಸೇವಾ ಸಂಗಳ ಸಹಯೋಗದಲ್ಲಿ 60 ದಿನ ಕಸೂತಿ ತರಬೇತಿ ಪಡೆದ ಮಹಿಳೆಯರಿಗೆ ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

ಹಳ್ಳಿಯ ಮಹಿಳೆಯರು ಕೇವಲ ಮನೆ, ಹೊಲದ ಕೆಲಸಕ್ಕೆ ಸೀಮಿತವಾಗದೇ, ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆಯುವ ಜತೆಗೆ ಸರ್ಕಾರ ಹಮ್ಮಿಕೊಳ್ಳುತ್ತಿರುವ ವಿವಿಧ ತರಬೇತಿಗಳನ್ನು ಪಡೆದು ತಮ್ಮ ಕೌಶಲ ಹೆಚ್ಚಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು. ಶಿಬಿರದಲ್ಲಿ 30 ಮಹಿಳೆಯರಿಗೆ ಕಸೂತಿ ತರಬೇತಿ ಜತೆಗೆ ಗೌರವಧನವನ್ನು ನೀಡಲಾಗಿದ್ದು, ಅದನ್ನು ಉತ್ತಮ ಕೆಲಸಕ್ಕೆ ವಿನಿಯೋಗಿಸಿ ಕೊಳ್ಳಬೇಕು. ಅಲ್ಲದೆ, ತರಬೇತಿಗೆ ಹಾಜರಾದ ಕೆಲ ಮಹಿಳೆಯರಿಗೆ ಇಲಾಖೆಯಿಂದ ಹೊಲಿಗೆ ಯಂತ್ರಗಳನ್ನು ನೀಡಲಾಗುವುದು ಎಂದರು.

ಆಲ್​ ಇಂಡಿಯಾ ಬಂಜಾರಾ ಸೇವೆ ಸಂದ ಯುವ ಟಕದ ಜಿಲ್ಲಾಧ್ಯಕ್ಷ ರವಿ ಲಮಾಣಿ ಮಾತನಾಡಿ, ತರಬೇತಿ ಪಡೆದ ಮಹಿಳೆಯರು ತಮ್ಮದೇಯಾದ ಗುಂಪು ಮಾಡಿ ಬಂಜಾರಾ ಕಸೂತಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಉದ್ಯಮ ಪ್ರಾರಂಭಿಸಬೇಕು ಎಂದರು.

ಸಂದ ಬಾಬು ಪವಾರ, ಶಾರದಾ ಲಮಾಣಿ, ಸುನೀಲ, ತರಬೇತಿದಾರ ಜಯಶ್ರೀ ಲಮಾಣಿ, ಕರಕುಶಲ ಸೇವಾ ಕೇಂದ್ರದ ಸಹಾಯಕ ಅಧಿಕಾರಿ ಖುಷ್​ಮಿಸ್​, ಸೇವು ಗೋಪು ಲಮಾಣಿ, ಲೋಕು ಚಹಾಣ, ಪರಶುರಾಮ ಪವಾರ, ವಾಲು ಪೂಜಾರಿ, ಗಣಪತಿ ಪೂಜಾರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net