ಮಂಡ್ಯ ನಗರದಲ್ಲಿ ಸಾವಯವ ಸಂತೆ ಪುನಾರಂಭ

IMG-20201120-WA0046
Published on

ಮಂಡ್ಯ: ಸಾವಯವ ಕೃಷಿಕರ ಸಹಕಾರ ಸಂಘ, ಆರ್ಗ್ಯಾನಿಕ್ ಮಂಡ್ಯ, ರಾಜ್ಯ ರೈತ ಸಂಘ, ಸ್ವದೇಶಿ ಜಾಗರಣ ಮಂಚ್, ಬಯಲು ಸೀಮೆ ಬೆಳೆಗಾರರ ಬಳಗ ವತಿಯಿಂದ ನ.22ರಂದು ಮಧ್ಯಾಹ್ನ 3 ರಿಂದ ರಾತ್ರಿ 7 ಗಂಟೆವರೆಗೆ ನಗರದ ಜಿಲ್ಲಾ ತೋಟಗಾರಿಕೆ ಇಲಾಖೆ ಮುಂಭಾಗ ಸಾವಯವ ಸಂತೆ ನಡೆಯಲಿದೆ ಸಾವಯವ ಕೃಷಿಕರ ಎಂದು ಸಹಕಾರ ಸಂಘದ ಸಿಇಒ ಕಾರಸವಾಡಿ ಮಹದೇವು ಹೇಳಿದರು.
ಸಂತೆಯಲ್ಲಿ ಸಿರಿಧಾನ್ಯ, ಸಾವಯವ ಉತ್ಪನ್ನ, ಸಾವಯವ ಅಕ್ಕಿ, ಬೆಲ್ಲ, ಸೊಪ್ಪು ತರಕಾರಿ, ಪರಂಗಿ, ಸಪೋಟ, ಬಾಳೆಹಣ್ಣು, ಗೋ ಆಧಾರಿತ ಉತ್ಪನ್ನ, ಕಬ್ಬಿನ ಜ್ಯೂಸ್, ದೇಶಿ ಪಾನೀಯ, ಸಿರಿಧಾನ್ಯಗಳಿಂದ ಮಾಡಿದ ತಿಂಡಿ ತಿನಿಸು, ಗಿಡ ಮೂಲಿಕೆಗಳಿಂದ ಮಾಡಿದ ಕಷಾಯ, ನೈಸರ್ಗಿಕ ಸೌಂದರ್ಯ ವರ್ಧಕಗಳು ಸೇರಿದಂತೆ ಇನ್ನಿತರೆ ಸಾವಯವ ವಸ್ತುಗಳು ಗ್ರಾಹಕರಿಗೆ ಸಿಗಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೃಷಿ ರೈತನ ಮುಖ್ಯ ಕಸುಬು. ಆದರೆ ರೈತರು ಭೂಮಿ ತಾಯಿಗೆ ವಿಷವುಣಿಸಿ ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ನಮ್ಮ ಹಿರಿಯರು ಮಾಡುತ್ತಿದ್ದ ಪದ್ಧತಿ ಅನುಸರಿಸಿ ಕೃಷಿ ಮಾಡುತ್ತಿರುವ ಕುಟುಂಬಗಳು ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಸಾವಯವ ಸಂತೆಯಲ್ಲಿ ನಗರದ ನಾಗರಿಕರು ಪಾಲ್ಗೊಂಡು ವಿಷಮುಕ್ತ ಆಹಾರವನ್ನು ಬಳಸುವ ಮೂಲಕ ವಿಷಮುಕ್ತ ನಗರ ಮಾಡಲು ಪ್ರತಿಯೊಬ್ಬರು ಪಣತೊಡಬೇಕು. ರೋಗಗಳಿಂದ ಮುಕ್ತವಾಗಿ ಉತ್ತಮ ಜೀವನ ನಡೆಸಬೇಕು ಎಂದು ಮನವಿ ಮಾಡಿದರು.
ಸಾವಯವ ಕೃಷಿಕರಾದ ಶಿವಣ್ಣಗೌಡ ಮಾರಗೌಡನಹಳ್ಳಿ, ರವಿ ಮಂಡ್ಯ, ಅನಿಲ್‌ಕುಮಾರ್, ಮಾದರಹಳ್ಳಿ ರಾಜು, ಸಿರಿಧಾನ್ಯ ತಿಂಡಿ ತಯಾರಕಿ ಮಂಜುಳ ಚಂದಗಾಲು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net