ನಗರದಲ್ಲಿ ಸಾವರ್ಕರ್ ರಥಯಾತ್ರೆಗೆ ಅದ್ದೂರಿ ಸ್ವಾಗತ: ಪ್ರಮುಖ ರಸ್ತೆಗಳಲ್ಲಿ ಭರ್ಜರಿ ಮೆರವಣಿಗೆ

kadal news (2)
Published on

ಮಂಡ್ಯ: ಮೈಸೂರಿನಿಂದ ಆಗಮಿಸಿದ ಸಾವರ್ಕರ್ ರಥಯಾತ್ರೆಗೆ ಭಾನುವಾರ ನಗರದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಬೆಳಗ್ಗೆ ಬೆಸಗರಹಳ್ಳಿಯಿಂದ ಹೊರಟ ರಥ ಕೆರಗೋಡು, ಹುಲಿವಾನ ಸಾತನೂರು ಮಾರ್ಗವಾಗಿ ಮಂಡ್ಯಕ್ಕೆ ಆಗಮಿಸಿತು. ಗಡೀ ಭಾಗದಿಂದಲೇ ರಥಯಾತ್ರೆಯನ್ನು ಸ್ವಾಗತಿಸಿದ ಹಿಂದು ಸಂಘಟನೆಗಳ ಹಾಗೂ ಬಿಜೆಪಿ ಕಾರ್ಯಕರ್ತರು ಬೈಕ್ ರ‍್ಯಾಲಿಯೊಂದಿಗೆ ಕಾಳಿಕಾಂಬ ದೇವಾಲಯದ ಬಳಿಗೆ ಕರೆತಂದರು. ನಂತರ ನಂದಾ ಚಿತ್ರಮಂದಿರ, ಹೆದ್ದಾರಿ, ಸಕ್ಕರೆ ವೃತ್ತ, ಗುತ್ತಲು ರಸ್ತೆ, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಮಹಾವೀರ ವೃತ್ತ, ವಿ.ವಿ. ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ, ಚಾಮುಂಡೇಶ್ವರಿ ನಗರ, ಕಲ್ಲಹಳಿ ವಿ.ವಿ. ನಗರ, ಎಪಿಎಂಸಿ ಮಾರುಕಟ್ಟೆ ಮಾರ್ಗವಾಗಿ ಹೆದ್ದಾರಿಗೆ ಬಂದ ರಥಯಾತ್ರೆಯನ್ನು ಮಂಡ್ಯ ಗಡೀವರೆವಿಗೂ ಕರೆದೊಯ್ದು ಬೀಳ್ಕೊಟ್ಟರು. ಬಳಿಕ ರಥಯಾತ್ರೆ ಶ್ರೀರಂಗಪಟ್ಟಣದತ್ತ ತೆರಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net