ಸಾವರ್ಕರ್ ಕಾಲಿಗೆ ಧೂಳಿಗೂ ಸಮಾನರಲ್ಲ

24-09-Shiva-1
ರಾಯಚೂರಿನ ವೀರ ಸಾವರ್ಕರ್ ಯೂಥ್ ಅಸೋಸಿಯೇಷನ್‌ನಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶನಿವಾರ ರಾತ್ರಿ ವಿಶೇಷ ಪೂಜೆ ಸಲ್ಲಿಸಿದರು. ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಲಲತಾ ಕಡಗೋಲ ಇದ್ದರು.
Published on

ರಾಯಚೂರು: ವೀರ ಸಾವರ್ಕರ್ ಕಾಲಿನ ಧೂಳಿಗೂ ಸಮಾನರಲ್ಲದವರು ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಸ್ವಾತಂತ್ರ ವೀರರಿಗೆ ಅಪಮಾನ ಮಾಡುವಂತಹ ಕೆಲಸವನ್ನು ಕೆಲವರು ಮಾಡುತ್ತಿದ್ದು, ಸಾವರ್ಕರ್‌ಗೆ ನೀಡಿದಂತಹ ಶಿಕ್ಷಕೆ ಇವರಿಗೆ ನೀಡಿದರೆ ಗೊತ್ತಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದ ವೀರ ಸಾವರ್ಕರ್ ಯೂಥ್ ಅಸೋಸಿಯೇಷನ್‌ನಿಂದ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ ಹೋರಾಟದಲ್ಲಿ ನೆಹರು ಸಹ ಜೈಲಿಗೆ ಹೋಗಿದ್ದರು. ಐದು ದಿನದೊಳಗೆ ತಪ್ಪೋಪ್ಪಿಗೆ ಬರೆದುಕೊಟ್ಟಿದ್ದರು ಎಂದರು.
ಪೋರ್ಚಗೀಸರು, ಡಚ್ಚರು, ಬ್ರಿಟಿಷರಿಂದ ಸನಾತನ ಧರ್ಮ ನಾಶ ಮಾಡಲಾಗಲಿಲ್ಲ. ಇನ್ನೂ ದೇಶದಲ್ಲಿರುವ ಇವರೇನು ನಾಶ ಮಾಡುತ್ತಾರೆ. ಕೆಲವರು ಸನಾತನ ಧರ್ಮದ ಬಗ್ಗೆ ಮಾತನಾಡಿ ಪ್ರಚಾರ ಪಡೆಯುತ್ತಿದ್ದಾರೆ. ಸನಾತನ ಧರ್ಮದ ಉಳಿವಿಗಾಗಿ ಮತ್ತೊಮ್ಮೆ ಮೋದಿಯನ್ನು ಗೆಲ್ಲಿಸಬೇಕು.
ದೇಶಕ್ಕೆ ಸ್ವಾತಂತ್ರ ಸಿಕ್ಕಿದ್ದು ಗಾಂೀಜಿಯ ಉಪವಾಸದಿಂದಲ್ಲ. ಸುಭಾಶ್ಚಂದ್ರ ಬೋಸ್‌ರ ಬಂದೂಕಿನ ಸದ್ದಿನಿಂದ. ಸರ್ದಾರ್ ವಲ್ಲಭಬಾಯ್ ಪಟೇಲ್ ಪ್ರಧಾನಿ ಆಗಬೇಕಾಗಿತ್ತು. ಆದರೆ ಗಾಂೀಜಿ ನೆಹರುರನ್ನು ಪ್ರಧಾನಿಯನ್ನಾಗಿ ಮಾಡಿದರು.
ಹೈದರಾಬಾದ್‌ನಲ್ಲಿದ್ದು ಏನೂ ಮಾಡಲಾಗದ ಓವೈಸಿ ಹಿಂದುಗಳನ್ನು ಕೊನೆಗಾಣಿಸುತ್ತೇನೆ ಎಂದು ಹೇಳುತ್ತಾನೆ. ಅಖಂಡ ಭಾರತವನ್ನು ನಾವು ಮಾಡುತ್ತೇವೆ. ಅಘಾನಿಸ್ತಾನ್, ಪಾಕಿಸ್ತಾನ, ಬಲೂಚಿಸ್ತಾನದಲ್ಲೂ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ.
ಪಾಕಿಸ್ತಾನದವರು ಮೋದಿ ಬೇಕು ಅಂತಿದಾರೆ. ಆದರೆ ಭಾರತದ ಕೆಲವು ಕಳ್ಳರು ರಾಹುಲ್ ಪ್ರಧಾನಿ ಆಗಬೇಕು ಅಂತೀದಾರೆ. ಪೊಲೀಸರು ಹಸಿರು ಶಾಲು ಹಾಕಿಕೊಳ್ಳಬಾರದು ಎಂದು ಡಿಸಿಎಂ ಹೇಳುತ್ತಾರೆ. ಹಸಿರು ಶಾಲು ಹಾಕೊಂಡು ಓಡಾಡಬೇಕಾ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಲಲತಾ ಕಡಗೋಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net