ಸಾವರ್ಕರ್ ಪುತ್ಥಳಿ ಬದಲಿಗೆ ಸರ್ಕಲ್: ಶಾಸಕ ರಘುಪತಿ ಭಟ್

udp-raghupathi Bhat MLA 2
Published on

ಉಡುಪಿ: ಬ್ರಹ್ಮಗಿರಿ ಸರ್ಕಲ್ನಲ್ಲಿ ಸಾವರ್ಕರ್ ಪುತ್ಥಳಿ ನಿರ್ಮಿಸಲು ಕಾರ್ಯಕರ್ತರಿಂದ ಒತ್ತಡ ಹೆಚ್ಚಿದೆ. ಆದರೆ ಪುತ್ಥಳಿ ಬದಲಿಗೆ ಸಾವರ್ಕರ್ ಸರ್ಕಲ್ ನಿರ್ಮಿಸಲಾಗುವುದು ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಮೆ ಮಾಡುವುದು ಅಷ್ಟೊಂದು ಸಮಂಜಸ ಅಲ್ಲ. ಮುಂದಿನ ದಿನಗಳಲ್ಲಿ ಪ್ರತಿಮೆಗೆ ಅವಮಾನವಾದರೆ ಕಾನೂನು ಸುವ್ಯವಸ್ಥೆ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ ಪುತ್ಥಳಿ ಬದಲಿಗೆ ಸಾವರ್ಕರ್ ಸರ್ಕಲ್ ನಿರ್ಮಿಸಲು ನಗರಸಭೆಗೆ ಪತ್ರ ಬರೆದಿದ್ದೇನೆ ಎಂದರು.

ಜನನಿಬಿಡ ಪ್ರದೇಶವಾದ ಹಳೆ ತಾಲೂಕು ಆಫೀಸ್ ಬಳಿಯ ಸರ್ಕಲ್ಗೆ ಸಾವರ್ಕರ್ ಹೆಸರಿಡಲು ನಗರ ಸಭೆಯ ಅಧಿವೇಶನದಲ್ಲಿ ಠರಾವು ಮಂಡಿಸಲಾಗುವುದು. ಖಂಡಿತವಾಗಿ ಉಡುಪಿಯಲ್ಲಿ ವೀರ ಸಾವರ್ಕರ್ ಸರ್ಕಲ್ ನಿರ್ಮಾಣವಾಗುತ್ತದೆ. ಸಾವರ್ಕರ್ ಜೊತೆಗೆ ಅಂಬೇಡ್ಕರ್ ಸರ್ಕಲ್ ಕೂಡ ನಿರ್ಮಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net