

ಸವಣೂರ: ಮೈಸೂರಿನ ದಿವಾನ, ಇಂಜಿನಿಯರ್, ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾಗಿ ನಾಡಿಗೆ ಮಹತ್ತರ ಕೊಡುಗೆ ನೀಡಿದ ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ನಾಡು ಸದಾ ಸ್ಮರಿಸಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಸಿ.ಎನ್. ಪಾಟೀಲ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ವತಿಯಿಂದ ಪಟ್ಟಣದ ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಕಿ, ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯೆ ಮಂಜುಳಾ ರಾಶಿನಕರ ಕಾರ್ಯಕ್ರಮ ಉದ್ಘಾಟಿಸಿದರು. ಪರಶುರಾಮ ಈಳಗೇರ, ಸಿ.ಎನ್. ಲಕ್ಕನಗೌಡ್ರ, ಪ್ರವೀಣ ಚರಂತಿಮಠ, ವೀರೇಶ ಸಂಕಿನಮಠ, ವಿಶ್ವನಾಥ ಹಾವಣಗಿ, ರೇಖಾ ಕಣೇಕಲ್ಲ, ಸರೋಜಾ ರಾಯ್ಕರ, ಜ್ಯೋತಿ ಅಂಗಡಿ, ಪುಷ್ಪಾ ಬತ್ತಿ, ಕವಿತಾ ಬಿಕ್ಕಣ್ಣವರ ಇತರರು ಇದ್ದರು. ಕಸಾಪ ಪದಾಧಿಕಾರಿಗಳಾದ ಸಿ.ವಿ. ಗುತ್ತಲ ಹಾಗೂ ಬಸನಗೌಡ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.