

ಸವಣೂರ: ಅತ್ಯಂತ ಉಪಯುಕ್ತವಾಗಿ ಮೂಡಿ ಬರುತ್ತಿರುವ ‘ವಿಜಯವಾಣಿ’ ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಎಲ್ಲ ವಿದ್ಯಾರ್ಥಿಗಳು ಓದಬೇಕು ಎಂದು ವಸತಿ ನಿಲಯ ಮೇಲ್ವಿಚಾರಕಿ ಪ್ರಭಾವತಿ ಹಲಗಣ್ಣನವರ ಹೇಳಿದರು.
ತಾಲೂಕಿನ ಹುರಳಿಕುಪ್ಪಿ ಗ್ರಾಮದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಮಿತ್ರ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವೃತ್ತ ಪತ್ರಿಕೆಗಳು ಸಾಮಾಜಿಕ ಸುದ್ದಿ ಬಿತ್ತರಿಸಿದರೆ, ವಿದ್ಯಾರ್ಥಿ ಮಿತ್ರ ಶೈಕ್ಷಣಿಕ ಹಾಗೂ ಉದ್ಯೋಗ ಆಧಾರಿತ ಸುದ್ದಿ ನೀಡಿ ವಿದ್ಯಾರ್ಥಿಗಳು ಮತ್ತು ಯುವ ಸಮೂಹಕ್ಕೆ ದಾರಿ ದೀಪವಾಗಿವೆ. ಕೇವಲ ಒಂದು ರೂಪಾಯಿಯಲ್ಲಿ ಸಮಗ್ರ ವರದಿಯನ್ನು ನೀಡುತ್ತಿರುವ ವಿಜಯವಾಣಿ ಹಾಗೂ ವಿಆರ್‌ಎಲ್ ಸಂಸ್ಥೆಯ ಸಾಮಾಜಿಕ ಕಾರ್ಯ ಶ್ಲಾಘನೀಯ ಎಂದರು. ವಿಜಯವಾಣಿ ದಿನಪತ್ರಿಕೆ ವಿತರಕ ಮಂಜುನಾಥ ಪಿಳ್ಳಿ, ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.