ಅಂಗವಿಕಲರ ಸೌಲಭ್ಯಕ್ಕೆ ಗುರುತಿನ ಚೀಟಿ ಕಡ್ಡಾಯ

21-SVR- AMGAVIKALARU
Published on

ಸವಣೂರ: ಅಂಗವಿಕಲರು ಸರ್ಕಾರಿ ಸೌಲಭ್ಯ ಪಡೆಯಲು ಕಡ್ಡಾಯವಾಗಿ ವಿಶಿಷ್ಟ ಗುರುತಿನ ಚೀಟಿ ಯುಡಿಐಡಿ ಕಾರ್ಡ್ ಪಡೆಯಲೇಬೇಕು ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಂಕರಗೌಡ ಹಿರೇಗೌಡ್ರ ಹೇಳಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ತಾಪಂ, ಗ್ರಾಪಂ, ಎಂಆರ್‌ಡಬ್ಲುೃ, ವಿಆರ್‌ಡಬ್ಲುೃ, ಯುಆರ್‌ಡಬ್ಲುೃ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಂಗವಿಕಲರ ಮನೆ ಬಾಗಿಲಿಗೆ ಯುಡಿಐಡಿ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲುಬು-ಕೀಲು ತಜ್ಞ ಡಾ. ಲಕ್ಷ್ಮಣ ನಾಯಕ, ರಾಮಕೃಷ್ಣ ಘಾಟಗೆ, ಈರಯ್ಯ ಹಿರೇಮಠ, ಚಂದ್ರಶೇಖರ ಹುಲಗೂರ, ಅಮೃತಗೌಡ ನಿಂಗನಗೌಡ್ರ, ಹಜರತಲಿ ಕಮ್ಮಾರ, ಅನ್ನಪೂರ್ಣ ಹಾಲಗಿ, ಹನುಮಂತಪ್ಪ ಕಲಿವಾಳ, ತಿಪ್ಪಣ್ಣ ಬಳಿಗಾರ, ಪ್ರಶಾಂತ ಚಂದ್ರಾಪಟ್ಟಣ, ಬಾಪುಗೌಡ ನೀರಲಗಿ, ಸಾವಿತ್ರಿ ಯರಗುಪ್ಪಿ, ಪರಮೇಶ ಮಲ್ಲಮ್ಮನವರ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net