ಸವಣೂರು ಸಾಮಾಜಿಕ ಪರಿಶೋಧನೆ ಗ್ರಾಮಸಭೆ

Kdb_Grama-sabhe
Published on

ಕಡಬ: ಸವಣೂರು ಗ್ರಾ.ಪಂನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ ಕಾಮಗಾರಿಗಳ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಮಂಗಳವಾರ ನಡೆಯಿತು.

ಕಡಬ ಪಶುವೈದ್ಯ ಕೇಂದ್ರದ ಪಶುವೈದ್ಯಾಧಿಕಾರಿ ಡಾ.ಅಜಿತ್ ಅಧ್ಯಕ್ಷತೆ ವಹಿಸಿ, ಸಾಮಾಜಿಕ ಪರಿಶೋಧನೆ ನಡೆಸಿದರು. ಉದ್ಯೋಗ ಖಾತ್ರಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಪ್ರವೀಣ್ ಮಾಹಿತಿ ನೀಡಿದರು.

ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸಂದೇಶ್ ಕೆ.ಎನ್, ಹಿಂದಿನ ಗ್ರಾಮಸಭೆಯ ಅನುಪಾಲನಾ ಕ್ರಮಗಳನ್ನು ಸಭೆಯ ಮುಂದಿಟ್ಟರು. ತಾಲೂಕು ಐ.ಇ.ಸಿ ಸಂಯೋಜಕ ಭರತ್‌ರಾಜ್ ಕೆ. ಪಟ್ಟಿ ಮುಂದಿಟ್ಟರು.

ಸವಣೂರು ಗ್ರಾ.ಪಂ ಅಧ್ಯಕ್ಷೆ ಸುಂದರಿ ಬಿ.ಎಸ್, ಉಪಾಧ್ಯಕ್ಷೆ ಜಯಶ್ರೀ ವಿಜಯ, ತಾಂತ್ರಿಕ ಅಭಿಯಂತರಾದ ಮನೋಜ್ ಕುಮಾರ್, ಹೃತಿಕ್, ಗ್ರಾ.ಪಂ ಸದಸ್ಯರಾದ ಗಿರಿಶಂಕರ ಸುಲಾಯ, ರಾಜೀವಿ ಶೆಟ್ಟಿ, ಭರತ್ ರೈ ಕೆ, ತಾರಾನಾಥ ಬೊಳಿಯಾಲ, ಸತೀಶ್ ಅಂಗಡಿಮೂಲೆ, ರಫೀಕ್ ಎಂ.ಎ, ತೀರ್ಥರಾಮ ಕೆಡೆಂಜಿ, ಯಶೋದಾ, ಚೆನ್ನು ಮುಂಡೋತಡ್ಕ, ಇಂದಿರಾ ಬೇರಿಕೆ, ಚಂದ್ರಾವತಿ ಸುಣ್ಣಾಜೆ ಮತ್ತಿತರರು ಉಪಸ್ಥಿತರಿದ್ದರು. ಸಿಬ್ಬಂದಿ ಪ್ರಮೋದ್ ಕುಮಾರ್ ಬಿ, ದಯಾನಂದ ಎಂ, ಜಯಶ್ರೀ, ಜಯಾ ಕೆ, ಯತೀಶ್, ದೀಪಿಕಾ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net