

ಸವಣೂರ: ಭಕ್ತರ ಪಾಲಿನ ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸ್ಮರಣೆಯನ್ನು ಮಾಡುವುದು ಅವಶ್ಯವಾಗಿದೆ ಎಂದು ಅಗಡಿಯ ಪ್ರಭುಸ್ವಾಮಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಹೇಳಿದರು.
ತಾಲೂಕಿನ ಜಲ್ಲಾಪುರ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಲಿಂ. ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಹಾಗೂ ನುಡಿ ನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ತಮ್ಮ ಪ್ರವಚನಗಳ ಮೂಲಕ ಭಕ್ತರ ಆರಾಧ್ಯ ದೈವವಾಗಿದ್ದ ಶ್ರೀಗಳು, ಮಠಾಧೀಶರಿಗೆ ಮಾದರಿಯಾಗಿದ್ದಾರೆ ಎಂದರು. ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿದರು. ಹಿರಿಯ ಸಾಹಿತಿ ಪುಷ್ಪಾ ಶಲವಡಿಮಠ ಅವರು ಶ್ರೀಗಳ ಜೀವನ ಚರಿತ್ರೆ ಕುರಿತು ನುಡಿ ನಮನ ಸಲ್ಲಿಸಿದರು. ಬಿ.ಎಂ. ಚಕ್ರಸಾಲಿ, ರಾಜು ಕುಮರಿ ಹಾಗೂ ವೀರೇಶ ಹಿತ್ತಲಮನಿ ಕಾರ್ಯಕ್ರಮ ನಿರ್ವಹಿಸಿದರು.