ಗಣಿತ ತತ್ವಗಳ ಪ್ರದರ್ಶನದಿಂದ ಬೌದ್ಧಿಕ ವಿಕಸನ

3-svr-4 school
Published on

ಸವಣೂರ: ಮಕ್ಕಳಲ್ಲಿ ಗಣಿತ ಜ್ಞಾನ ವೃದ್ಧಿಸಲು ಮತ್ತು ಅವರಲ್ಲಿ ಸೃಜನಾತ್ಮಕತೆ ಉತ್ತೇಜಿಸಲು ಸಿದ್ಧೇಶ್ವರ ಶ್ರೀಗಳ ಪುಣ್ಯಸ್ಮರಣೆ ದಿನ ಏರ್ಪಡಿಸಿರುವ ಗಣಿತ ತತ್ವಗಳ ಪ್ರದರ್ಶನ ಮಕ್ಕಳ ಬೌದ್ಧಿಕ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದು ಸಾಧನೆ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಗಂಗಾಧರ ಬಾಣದ ಹೇಳಿದರು.

ತಾಲೂಕಿನ ಯಲವಿಗಿ ಗ್ರಾಮದ ಸಾಧನೆ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರಗತಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಗಣಿತ ತತ್ವಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಿಯಾಶೀಲ ಶಿಕ್ಷಕರು, ಹಲವು ವಿನೂತನ ಪ್ರಯತ್ನ ಕೈಗೊಳ್ಳುತ್ತ ಮಕ್ಕಳ ಬೌದ್ಧಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಗಣಿತ ಶಿಕ್ಷಕಿ ನಿರ್ಮಲಾ ತೆಂಬದಮನಿ ಮಾತನಾಡಿ, ಭಾರತೀಯ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ನರ ಕುರಿತು ಮಾತನಾಡಿದರು.</p><p>ವೇ.ಮೂ. ಶಂಭುಲಿಂಗಯ್ಯ ಕಂಬಾಳಿಮಠ ನೇತೃತ್ವ ವಹಿಸಿದ್ದರು. ಸಂಸ್ಥೆ ಸದಸ್ಯ ರಘು ತೆಂಬದಮನಿ, ಸಿದ್ಧಲಿಂಗೇಶ ಜಠಾರ್, ಸೋಮಣ್ಣ ಚನ್ನೂರ, ಡಾ. ಮಹಾದೇವಪ್ಪ ಗಡೆಪ್ಪನವರ, ರಾಮಣ್ಣ ಬಡಿಗೇರ, ಯಲ್ಲಪ್ಪ ಮೂಲಿಮನಿ, ಮುಖ್ಯ ಶಿಕ್ಷಕಿ ರಾಜೇಶ್ವರಿ ಎಚ್., ತಾಲೂಕು ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಶಂಕ್ರಯ್ಯ ಹಿರೇಮಠ ಇತರರು ಪಾಲ್ಗೊಂಡಿದ್ದರು. ಜಯಶ್ರೀ ನಾಯಕ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net