ಕಾರಡಗಿ ಶ್ರೀ ವೀರಭದ್ರೇಶ್ವರ ಲಕ್ಷದೀಪೋತ್ಸವ ಡಿ. 1ರಂದು

29-svr karadagi iaranna
Published on

ಸವಣೂರ: ಕಾರ್ತಿಕ ಮಾಸದ ಛಟ್ಟಿ ಅಮಾವಾಸ್ಯೆ ಅಂಗವಾಗಿ ಶ್ರೀಕ್ಷೇತ್ರದ ಭಕ್ತರ ಇಚ್ಛೆಯಂತೆ ಡಿ. 1ರಂದು ಸಂಜೆ 5 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಲಕ್ಷ ದೀಪೋತ್ಸವ, ಕಾರ್ತಿಕೋತ್ಸವ ಹಾಗೂ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರಡಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆಡಳಿತ ಮಂಡಳಿ ಕಾರ್ಯದರ್ಶಿ ರಾಘವೇಂದ್ರಗೌಡ ಪಾಟೀಲ ತಿಳಿಸಿದರು.

ಕಾರ್ತಿಕೋತ್ಸವ ಅಂಗವಾಗಿ ಕಾರಡಗಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಂತ್ರೋಡಿ ಹಿರೇಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಗಂಜಿಗಟ್ಟಿ ಶ್ರೀ ಚರಮೂರ್ತೆಶ್ವರ ಮಠದ ಡಾ. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು ಪ್ರವಚನ ನೀಡುವರು. ಸಂಸದ ಬಸವರಾಜ ಬೊಮ್ಮಾಯಿ ಸಮಾರಂಭ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡುವರು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು ಎಂದರು.

ಪಶುಪತಿಹಾಳದ ಶ್ರೀ ಸಿದ್ಧಾರೂಢ ಜಾನಪದ ಕಲಾತಂಡ ಹಾಗೂ ಶ್ರೀ ಮಾಲತೇಶ ಡೊಳ್ಳಿನ ತಂಡದವರಿಂದ ಜಾನಪದ ಹಾಗೂ ತತ್ವಪದ ಕಾರ್ಯಕ್ರಮ ಜರುಗಲಿದೆ. ಗದಗ, ಹಾವೇರಿ, ಧಾರವಾಡ, ಕಾರವಾರ ಸೇರಿ ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ಬಸ್, ವಸತಿ ಹಾಗೂ ಪ್ರಸಾದ, ವಿವಿಧ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಸಂಸದ ಬಸವರಾಜ ಬೊಮ್ಮಾಯಿ ಅವರ ವಿಶೇಷ ಕಾಳಜಿಯಿಂದ ಅಂದಾಜು 3 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮಂಗಲ ಭವನ ಜೀಣೋದ್ಧಾರ ಕೈಗೊಂಡು ಕ್ಷೇತ್ರದಲ್ಲಿ ನಿರಂತರ ಧಾರ್ವಿುಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮ ಏರ್ಪಡಿಸುವ ಯೋಜನೆ ರೂಪಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದರು.

ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬಸನಗೌಡ ಪಾಟೀಲ, ಪದಾಧಿಕಾರಿಗಳಾದ ಲಾವಪ್ಪ ಕುರವತ್ತಿ, ರೇವಣಸಿದ್ದಪ್ಪ ಕಾಳಶೆಟ್ಟಿ, ವಿ.ಸಿ. ಪಾಟೀಲ, ವೆಂಕಟರಾವ್ ಕುಲಕರ್ಣಿ, ಬಸಟೆಪ್ಪ ಅತ್ತಿಗೇರಿ, ವೀರಪ್ಪ ತೋಂಡೂರ, ಶಂಕ್ರಪ್ಪ ಅಗಸಿಬಾಗಿಲ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net