ವಿದ್ಯಾರ್ಥಿ ಮಿತ್ರ ಪತ್ರಿಕೆ ಸದುಪಯೋಗಪಡಿಸಿಕೊಳ್ಳಿ

Vidyarthi Mitra
Published on

ಸವಣೂರ: ವಿದ್ಯಾರ್ಥಿ ಮಿತ್ರ ಪತ್ರಿಕೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಅನೇಕ ಮಾಹಿತಿಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಇದನ್ನು ಸರಿಯಾಗಿ ಓದುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸವಣೂರ ತಾಲೂಕು ಹುರಳಿಕೊಪ್ಪಿ ಜನತಾ ಪ್ರೌಢಶಾಲೆ ಶಿಕ್ಷಕ ಎಚ್.ಎ. ಪಾಟೀಲ ಸಲಹೆ ನೀಡಿದರು.
ಸವಣೂರ ತಾಲೂಕು ಹುರಳಿಕೊಪ್ಪಿ ಜನತಾ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ವಿದ್ಯಾರ್ಥಿ ಮಿತ್ರ’ ಪತ್ರಿಕೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿ ತರಗತಿಗಳ ಎಲ್ಲ ವಿಷಯಗಳ ಪ್ರಶ್ನೆಪತ್ರಿಕೆ, ಪಾಠ, ಶಿಕ್ಷಣ, ಉದ್ಯೋಗ, ಮತ್ತಿತರ ಮಹತ್ವದ ಅಂಶಗಳಿವೆ. ನಿತ್ಯವೂ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಿ ಎಂದರು
ಕಾರ್ಯಕ್ರಮಕ್ಕೆ ನೋಟರಿ, ವಕೀಲ ಆರ್.ಬಿ. ಪಾಟೀಲ ಚಾಲನೆ ನೀಡಿದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಟಿ.ಪಿ. ಪಾಟೀಲ, ವಕೀಲ ವಿ.ಎಸ್.ಕಟಗಿ, ಮುಖ್ಯ ಶಿಕ್ಷಕ ಪ್ರಕಾಶ ನಿರ್ವಾಣಿ, ಶಿಕ್ಷರಾದ ಎಚ್.ಎ. ಪಾಟೀಲ, ಟಿ.ಆರ್.ಬಂಕಾಪುರ, ಎಂ.ಎನ್.ಮುನೀರ್, ಪಿ.ಬಿ. ಹುಲ್ಲೂರ, ಪಿ.ಎಚ್.ಭಜಂತ್ರಿ, ಪಿ.ಎಂ.ಮುಳ್ಳಳ್ಳಿ, ಎಂ.ಬಿ. ಅಂಕನಾಳ, ನಾಗರಾಜ ಹೊಸಳ್ಳಿ, ಕರಬಸಪ್ಪ ಬಡಿಗೇರ, ಪತ್ರಿಕಾ ವಿತರಕ ಮಂಜುನಾಥ ಪಿಳ್ಳೆ, ವಿದ್ಯಾರ್ಥಿಗಳು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net