ಎಲೆಬಳ್ಳಿ ತೋಟ ನಾಶ ಮಾಡಿದ ದುಷ್ಟರು

Crime Logo
Published on

ಸವಣೂರ: ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ 1.80 ಲಕ್ಷ ರೂ. ಮೌಲ್ಯದ ವೀಳೆದ ಎಲೆಯ ಬಳ್ಳಿಯನ್ನು ಯಾರೋ ದುಷ್ಕಮಿರ್ಗಳು ಕಟಾವು ಮಾಡಿ ನಾಶ ಪಡಿಸಿದ ಘಟನೆ ತಾಲೂಕಿನ ಹುರಳಿಕುಪ್ಪಿ ರಸ್ತೆಯಲ್ಲಿ ಬುಧವಾರ ನಡೆದಿದೆ.

ಬಸವರಾಜ ಫಕ್ಕೀರಪ್ಪ ಮಟಿಗಾರ (52) ಎಂಬುವರ ಎಲೆ ಬಳ್ಳಿ ಹಾನಿ ಮಾಡಿರುವುದು.

ಇವರು ಎರಡು ಎಕರೆ ಜಮೀನಿನಲ್ಲಿ ವೀಳೆದ ಎಲೆ ತೋಟ ಮಾಡಿಕೊಂಡಿದ್ದರು. ಯಾರೋ ದುಷ್ಕಮಿರ್ಗಳು ಅದರಲ್ಲಿ 1.80 ಲಕ್ಷ ರೂ. ಮೌಲ್ಯದ 750ರಷ್ಟು ಬಳ್ಳಿಗಳನ್ನು ಕಟಾವು ಮಾಡಿ ನಾಶ ಪಡಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net