

ಸವಣೂರ: ಪತಿ ಹಾಗೂ ಪತ್ನಿ ಜಗಳವಾಡಿ ಇಬ್ಬರೂ ವಿಷ ಸೇವಿಸಿದ್ದು, ಆಸ್ಪತ್ರೆಯಲ್ಲಿ ಪತ್ನಿ ಮೃತಪಟ್ಟು ಪತಿ ಗುಣವಾದ ಘಟನೆ ಪಟ್ಟಣದ ಭೋವಿ ಓಣಿಯಲ್ಲಿ ಗುರುವಾರ ಸಂಭವಿಸಿದೆ.
ಲಕ್ಷ್ಮವ್ವ ಯಲ್ಲಪ್ಪ ಭೋವಿ (55) ಮೃತಳು. ಈಕೆಯ ಪತಿ ಯಲ್ಲಪ್ಪ ಗುಣವಾಗಿದ್ದಾರೆ.
ಇಬ್ಬರ ನಡುವೆ ವಿನಾಕಾರಣ ಜಗಳ ಬಂದಿದ್ದು, ಇದರಿಂದ ಇಬ್ಬರು ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅಕ್ಕಪಕ್ಕದವರು ಇವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಪತ್ನಿ ಲಕ್ಷ್ಮವ್ವ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಪತಿ ಯಲ್ಲಪ್ಪ ಗುಣವಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.