ಮಕ್ಕಳಾಗಲಿಲ್ಲ, ಸಾಲ ಕೂಡ ತೀರಲಿಲ್ಲವೆಂದು ವಿಷ ಕುಡಿದು ಮಹಿಳೆ ಆತ್ಮಹತ್ಯೆ

Crime Logo
Published on


ಸವಣೂರ: ಮದುವೆಯಾಗಿ 16 ವರ್ಷವಾದರೂ ಮಕ್ಕಳಾಗಲಿಲ್ಲ. ಕೃಷಿಗಾಗಿ ಹಾಗೂ ಮನೆ ಕಟ್ಟುವ ಸಲುವಾಗಿ ಮಾಡಿದ ಸಾಲ ಕೂಡ ತೀರಿಸಲಾಗಲಿಲ್ಲ ಎಂದು ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹತ್ತಿಮತ್ತೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ವಿದ್ಯಾಶ್ರೀ ಮಂಜುನಾಥ ಜಂಗಳಿ (35) ಮೃತ ಮಹಿಳೆ.
ಇವರು ಮದುವೆಯಾಗಿ 16 ವರ್ಷವಾದರೂ ಮಕ್ಕಳಾಗಿರಲಿಲ್ಲ. ಅಲ್ಲದೆ ಕೃಷಿಗಾಗಿ ಮತ್ತು ಮನೆ ಕಟ್ಟುವ ಸಲುವಾಗಿ ಸಾಲ ಮಾಡಿಕೊಂಡಿದ್ದರು. ಆದರೆ, ಕಳೆದ 2 ವರ್ಷದಿಂದ ಅತಿವೃಷ್ಟಿಯಿಂದ ಬೆಳೆ ಕೂಡ ಹಾನಿಯಾಗಿತ್ತು. ಇದರಿಂದ ಮನನೊಂದು ಮನೆಯಲ್ಲಿಯೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net