ಜಲಾಗಾರದ ಶುಚಿತ್ವ ಕಾಪಾಡುವಂತೆ ಸವಣೂರ ಮುಖ್ಯಾಧಿಕಾರಿ ಸೂಚನೆ

24 svr 02- Jalagara
Published on

ಸವಣೂರ: ಪಟ್ಟಣದ ನೀರು ಸರಬರಾಜಿನ ಜಲಾಗಾರಕ್ಕೆ ಗುರುವಾರ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಜಲಾಗಾರದ ಶುಚಿತ್ವ ಕಾಪಾಡುವಂತೆ ಸೂಚನೆ ನೀಡಿದರು.

ಆ. 24ರಂದು ವಿಜಯವಾಣಿ ಪ್ರಕಟಿಸಿದ ‘ಜಲಾಗಾರ ಜನಾರೋಗ್ಯಕ್ಕೆ ಸಂಚಕಾರ’ ಶೀರ್ಷಿಕೆಯಡಿ ಸವಣೂರಿನಲ್ಲಿ ಕಲುಷಿತ ನೀರು ಪೂರೈಕೆ ಕುರಿತು ವರದಿ ಹಿನ್ನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳ ತಂಡ ಪಟ್ಟಣದ ಧರ್ಮರಾಜ ನಗರದಲ್ಲಿರುವ ಜಲಾಗಾರಕ್ಕೆ ಭೇಟಿ ನೀಡಿ, ನೀರು ಸಂಗ್ರಹ ಹಾಗೂ ಸರಬರಾಜಿನ ಕುರಿತು ಸಂಪೂರ್ಣ ಮಾಹಿತಿ ಪಡೆದರು.

ಮೆಳ್ಳಾಗಟ್ಟಿ ವರದಾ ನದಿಯಿಂದ ಹರಿದು ಬರುವ ನೀರನ್ನು ಸೂಕ್ತ ನಿರ್ವಹಣೆಯೊಂದಿಗೆ ಶುದ್ಧೀಕರಿಸಿ ಪಟ್ಟಣಕ್ಕೆ ಸರಬರಾಜು ಮಾಡಲು ಮುಂದಾಗಬೇಕು ಹಾಗೂ ನೀರು ಶುದ್ಧೀಕರಣ ಯಂತ್ರಗಳ ದುರಸ್ತಿ ಕೈಗೊಳ್ಳಲು ಯೋಜನೆ ರೂಪಿಸಲು ಅಧಿಕಾರಿಗಳ ತಂಡಕ್ಕೆ ಸೂಚಿಸಿದರು.

ಮುಖ್ಯ ಇಂಜಿನಿಯರ್ ನಾಗರಾಜ ಮಿರ್ಜಿ, ವ್ಯವಸ್ಥಾಪಕ ಮಹೇಶ ದೊಡ್ಡಣ್ಣವರ, ನೋಡಲ್ ಇಂಜಿನಿಯರ್ ನಾಗರಾಜ ಆರ್. ಚೌವ್ವಾಣ, ಸಿಬ್ಬಂದಿ ಜಗದೀಶ ಕಾಳಶೆಟ್ಟಿ, ಅಶೋಕ ಕಾಳೆ ಹಾಗೂ ಇತರರು ಇದ್ದರು.

ನೀರು ಸರಬರಾಜಿಗೆ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಸಿಬ್ಬಂದಿಗೆ ಇಂದು ಸಭೆ ಕರೆದು ಜಲಾಗಾರ ಹಾಗೂ ನೀರಿನ ಟ್ಯಾಂಕ್ ಸ್ವಚ್ಛತೆ ಕೈಗೊಳ್ಳಲು ಸೂಚಿಸಲಾಗಿದೆ. ನೀರು ಶುದ್ಧೀಕರಣಗೊಳಸಿ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ಪಟ್ಟಣಕ್ಕೆ ನದಿ ನೀರು ಸರಬರಾಜು ಹಿನ್ನೆಲೆಯಲ್ಲಿ ಶುದ್ಧ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು. - ರೇಣುಕಾ ದೇಸಾಯಿ, ಮುಖ್ಯಾಧಿಕಾರಿ ಸವಣೂರ ಪುರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net