ಬಿಜೆಪಿ ಸರ್ಕಾರದ ಯೋಜನೆ ಮರು ಆರಂಭಿಸಿ

8-SVR-BJP STRIKE
Published on

ಸವಣೂರ: ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಸವಣೂರ ಮಂಡಲ ರೈತ ಮೋರ್ಚಾ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಕಚೇರಿಯಲ್ಲಿ ಶಿರಸ್ತೇದಾರ್ ತ್ರೀವೇಣಿ ನೀರಲಕಟ್ಟಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಿಸಾನ್ ಸಮ್ಮಾನ ನಿಧಿ, ರೈತ ವಿದ್ಯಾನಿಧಿ, ಭೂ ಸಿರಿ, ಶ್ರಮ ಶಕ್ತಿ, ರೈತ ಸಂಪದ ಯೋಜನೆಗಳನ್ನು ರದ್ದು ಮಾಡಲಾಗಿದೆ. ಅವುಗಳನ್ನು ಮರು ಆರಂಭಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ 7 ತಾಸು ವಿದ್ಯುತ್ ಪೂರೈಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸವಣೂರ ಬಿಜೆಪಿ ಮಂಡಲ ಅಧ್ಯಕ್ಷ ಗಂಗಾಧರ ಬಾಣದ, ಹನುಮಂತ ಮುದಿಗೌಡ್ರ, ಚನ್ನಬಸಯ್ಯ ದುರ್ಗದಮಠ, ಮಹೇಶ ಮಲಕಣ್ಣವರ, ಶ್ರೀಕಾಂತ ಲಕ್ಷ್ಮೇಶ್ವರ, ಮಹೇಶ ಮುದಗಲ್, ಮಹಾಂತೇಶ ಹಾವಣಗಿ, ರಾಮಣ್ಣ ಸಂಕ್ಲಿಪುರ, ಬಸವರಾಜ ಸವೂರ, ಪ್ರವೀಣ ಬಾಲೆಹೊಸೂರ, ಅಶೋಕ ಯಲಿಗಾರ, ಹೊನ್ನಪ್ಪ ಕೊಳ್ಳವರ, ಇಂದಿರಾ ಪುಟ್ಟನಗೌಡ್ರ, ದುರಗಪ್ಪ ಗಡೇದ, ನಂದೀಶ ಗೊಡ್ಡೆಮ್ಮಿ, ಪ್ರಕಾಶ ಮುದಿಗೌಡ್ರ, ಶ್ರೀನಿವಾಸ ಗಿತ್ತೆ, ಪಕ್ಷದ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net