ಸೇತುವೆಗೆ ಬೈಕ್ ಡಿಕ್ಕಿ; ಸವಾರ ಸಾವು

Published on

ಸವಣೂರ: ತಾಲೂಕಿನ ಹಳಗಟ್ಟಿ ಹಳ್ಳದ ಸೇತುವೆಗೆ ಡಿಕ್ಕಿ ಹೊಡೆದ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ತಾಲೂಕಿನ ಹೊಸಗೊಂಡೂರ ಗ್ರಾಮದ ಪ್ರವೀಣ ರಾಮಪ್ಪ ತೋಟದ (26) ಮೃತ ಬೈಕ್ ಸವಾರ.
ಈತ ಗ್ರಾಮದಿಂದ ಶಿಗ್ಗಾಂವಿಗೆ ತೆರಳುತ್ತಿದ್ದ ಸಮಯದಲ್ಲಿ ಬೈಕ್ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net