ಸವಳಂಗ ಹೊಸಕೆರೆಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

19 smg mohan naik
Published on

ಶಿವಮೊಗ್ಗ: ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ಹೊಸಕೆರೆಗೆ ಹಾರಿ ವಿದ್ಯಾರ್ಥಿಯೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ, ಸವಳಂಗ ಗ್ರಾಮದ ಮೋಹನ್ ನಾಯ್ಕ (19)ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಮನೆಯಲ್ಲಿ ಡೆತ್‌ನೋಟ್ ಬರೆದಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೊನ್ನಾಳಿ ಅಗ್ನಿಶಾಮಕ ದಳ ಮತ್ತು ಹರಿಹರದ ಮುಳುಗು ತಜ್ಞರು ಶೋಧಕಾರ್ಯ ನಡೆಸಿ ಸಂಜೆ ಮೃತದೇಹವನ್ನು ಹೊರತೆಗೆದರು. ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net