ಸಾವಳಗಿ ಹೆಸ್ಕಾಂ ಬಂದ್ ಮಾಡಿ ಪ್ರತಿಭಟನೆ

Savalagi Hescom closed and protested
ಸಮರ್ಪಕ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ಸಾವಳಗಿ ಹೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
Published on

ಸಾವಳಗಿ: ಸಮರ್ಪಕ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ಗ್ರಾಮದ ಹೆಸ್ಕಾಂ ಕಚೇರಿ ಬಂದ್ ಮಾಡಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಟಕ್ಕಳಕಿ, ಟಕ್ಕೋಡಿ, ಜಂಬಗಿ ಬಿ.ಕೆ., ಶೂರ್ಪಾಲಿ, ತುಬಚಿ, ತುಂಗಳ ಗ್ರಾಮಗಳ ಗ್ರಾಮಸ್ಥರು ಸಾವಳಗಿಗೆ ಆಗಮಿಸಿ ಹೆಸ್ಕಾಂ ಕಚೇರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಹೆಸ್ಕಾಂನವರು ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ. ಅಧಿಕಾರಿಗಳಿಗೆ ಫೋನ್ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಸುದ್ದಿ ತಿಳಿದು ಸಂಜೆ ವೇಳೆಗೆ ಜಮಖಂಡಿ ಹೆಸ್ಕಾಂ ಇಂಜಿನಿಯರ್ ವಿಶಾಲ ಧರೆಪ್ಪಗೋಳ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದು, ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ. ಇದರಿಂದ ರೈತರಿಗೆ ವಿದ್ಯುತ್ ಸರಿಯಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಮೇಲಧಿಕಾರಿಗಳಿಗೂ ಈ ಸಮಸ್ಯೆ ತಿಳಿಸಲಾಗಿದೆ. ಕೂಡಲೇ ಸಮರ್ಪಕ ವಿದ್ಯುತ್ ಪೂರೈಸುವುದಾಗಿ ಭರವಸೆ ನೀಡಿದರು. ನಂತರ ಅಧಿಕಾರಿಗಳ ಭರವಸೆ ಮೇರೆಗೆ ರೈತರು ಪ್ರತಿಭಟನೆ ಹಿಂಪಡೆದರು.

ಅಧಿಕಾರಿಗಳಾದ ಜೆ.ಸಿ. ಪಾಟೀಲ, ಬಿ. ಬಿ. ಜಾನ್, ಸೆಕ್ಷನ್ ಆಫೀಸರ್ ಎಸ್.ಆರ್. ನಲವಡೆ, ಪಿಎಸ್‌ಐ ಜಿ.ಎಂ. ಪೂಜಾರಿ ಮತ್ತಿತರಿದ್ದರು. ವಿವಿಧ ಗ್ರಾಮಗಳ ಹಲವಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net