ಅನವಶ್ಯ ಸಂಚರಿಸುವ ವಾಹನಗಳ ವಶ

BKT 31
Published on

ಸಾವಳಗಿ: ಕರೊನಾ ಕರ್ಫ್ಯೂ ಸಮಯದಲ್ಲಿ ಅನವಶ್ಯಕವಾಗಿ ಗ್ರಾಮದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. ಸಾವಳಗಿಯ ಪ್ರತಿಯೊಂದು ಮುಖ್ಯರಸ್ತೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ತಪಾಸಣೆ ಮಾಡುತ್ತಿದ್ದಾರೆ.

ಆಸ್ಪತ್ರೆಗೆ ಹೋಗುವ ವಾಹನ ಬಿಟ್ಟು ಉಳಿದ ವಾಹನಗಳನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದಾರೆ. ಇದರಿಂದ ಸಾವಳಗಿಯಲ್ಲಿ ವಾಹನ ಸಂಚಾರ ಕಡಿಮೆಯಾಗಿದೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪಿಎಸ್‌ಐ ಬಿ.ಸಿ. ಮಗದುಮ್, ಹೆಚ್ಚುವರಿ ಪಿಎಸ್‌ಐ ಕದಂ, ಎಸ್.ಎಸ್. ಹಲ್ಯಾಳ, ಎಂ.ಎಸ್. ಕಾರಜೋಳ, ಎನ್.ಬಿ. ಆಯಿತವಾಡ, ಎಸ್.ಎಸ್. ಬೀಳಗಿ, ಎನ್.ಟಿ. ದಡ್ಡಿಮನಿ, ಎಂ.ವೈ. ಕಲಾದಗಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಇದ್ದರು.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net