

ಸಾವಳಗಿ: ಗ್ರಾಮದ ಕಿರಾಣಿ ಅಂಗಡಿ, ಬೇಕರಿ, ಹೋಟೆಲ್ ಹಾಗೂ ಧಾಬಾಗಳಿಗೆ ಆಹಾರ ಸುರಕ್ಷತೆ ಅಧಿಕಾರಿಗಳ ತಂಡ ಭಾನುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು. ನಿಯಮಗಳನ್ನು ಪಾಲಿಸದವರಿಗೆ ಅಧಿಕಾರಿಗಳು ನೋಟಿಸ್ ನೀಡಿ ಎಚ್ಚರಿಕೆ ನೀಡಿದರು.
ಬೇಕರಿ ಹಾಗೂ ಪಾಸ್ಟ್‌ಫುಡ್ ಸೆಂಟರ್‌ಗಳಲ್ಲಿ ಸ್ವಚ್ಛತೆ ಪರಿಶೀಲಿಸಿದ ಅಧಿಕಾರಿಗಳು, ಆಹಾರ ಪದಾರ್ಥಗಳಿಗೆ ಗಾಜು ಅಳವಡಿಸುವಂತೆ ತಿಳಿಸಿದರು. ಪಾನಿಪುರಿ ಹಾಗೂ ಇನ್ನಿತರ ಅಡುಗೆ ರುಚಿ ಹೆಚ್ಚಿಸಲು ಆರೋಗ್ಯಕ್ಕೆ ಮಾರಕವಾಗಿರುವ ರಾಸಾಯನಿಕ ಪದಾರ್ಥಗಳನ್ನು ಬಳಸದಂತೆ ಎಚ್ಚರಿಕೆ ನೀಡಿದರು.
ಗ್ರಾಮದ ರಮೇಶ ಕಲಾಲ ಎಂಬುವವರಿಗೆ ಸೇರಿದ ಚಂದ್ರಗಿರಿ ಧಾಬಾ ಯಾವುದೇ ಪರವಾನಗಿ ಪಡೆದಿಲ್ಲ. ಧಾಬಾಗಳಲ್ಲಿ ಕೆಲ ದಿನಗಳ ಹಿಂದೆ ತಯಾರಿಸಿರುವ ಸಾಂಬಾರ, ಅವಧಿ ಮೀರಿದ ತಂಪುಪಾನೀಯಗಳು, ಕೆಲಸ ಮಾಡುವ ಕಾರ್ಮಿಕರು ವೈದ್ಯರಿಂದ ತಪಾಸಣೆ ಪಡೆದಿರಲಿಲ್ಲ. ಅಡುಗೆ ತಯಾರಿಕೆಯಲ್ಲಿ ಸ್ವಚ್ಛತೆ ಪಾಲಿಸಿರಲಿಲ್ಲ, ತಟ್ಟೆ ಹಾಗೂ ಚಮಚಗಳನ್ನು ಬಿಸಿನೀರಿನಿಂದ ಸ್ವಚ್ಛಗೊಳಿಸಿರುವುದಿಲ್ಲ ಎಂಬ ಕಾರಣದಿಂದ ಅಧಿಕಾರಿಗಳು ಢಾಬಾ ಮಾಲೀಕರಿಗೆ ನೋಟಿಸ್ ನೀಡಿದರು.
ಈಗಾಗಲೇ ನಮ್ಮ ತಾಲೂಕು ಅಧಿಕಾರಿಗಳ ತಂಡ ಸಾವಳಗಿಯಲ್ಲಿನ ಅನಧಿಕೃತ ಧಾಬಾ ಹಾಗೂ ಸ್ವಚ್ಛತೆ ಪಾಲಿಸದ ಹೋಟೆಲ್‌ಗಳಿಗೆ ಭೇಟಿ ನೀಡಿ ನೋಟಿಸ್ ನೀಡಿದ್ದಾರೆ. ಮಾದರಿ ತಿಂಡಿತಿನಿಸುಗಳು ಹಾಗೂ ಸಾಂಬಾರ ಸ್ಯಾಂಪಲ್ ಪಡೆದಿದ್ದು, ಬೆಳಗಾವಿ ಲ್ಯಾಬ್‌ಗೆ ಆಹಾರ ತಪಾಸಣೆಗೆ ಕಳುಹಿಸಿದ್ದೇವೆ. ನಂತರ ನೋಟಿಸ್ ಪಡೆದ ವ್ಯಕ್ತಿಗಳ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು.
-ಡಿ.ಕೆ. ಪಟ್ಟಣಶೆಟ್ಟಿ, ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿ, ಬಾಗಲಕೋಟೆ
EndFragment